ಸ್ಯಾನ್ ಆಂಟೋನಿಯೊ: ಅಮೆರಿಕದ ಶ್ವೇತಭವನ ಮತ್ತು ಟ್ರಂಪ್ ಟವರ್ ಸೇರಿದಂತೆ ವಿವಿಧ ತಾಣಗಳ ಮೇಲೆ ಬಾಂಬ್ ದಾಳಿ ನಡೆಸಲು ಅಥವಾ ಗುಂಡು ಹಾರಿಸುವಂತಹ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಸಿದ್ದಾಗಿ ದಕ್ಷಿಣ ಕೊರೊಲಿನಾದ ವ್ಯಕ್ತಿಯೊಬ್ಬ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಫೆಡರಲ್ ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಿಸ್ಟೋಫರ್ ಸೀನ್ ಮ್ಯಾಥ್ಯೂಸ್ (34) ತಪ್ಪೊಪ್ಪಿಕೊಂಡ ವ್ಯಕ್ತಿ. ಈತ ‘ತಾನು ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ಉತ್ತೇಜನಗೊಂಡು ಈ ದಾಳಿಯ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಯಾನ್ ಆಂಟೊನಿಯೊ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಕ್ರಿಸ್ಟೋಫರ್, ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಭಯೋತ್ಪಾದಕ ಚಟುವಟಿಕೆಗೆ ಪೂರಕ ವಸ್ತುಗಳನ್ನು ಪೂರೈಸಿದ್ದಾಗಿಯೂ ತಿಳಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈತ ಮೇ 2019ರಿಂದಲೂ ಟೆಕ್ಸಾಸ್‌ನ ಜಯ್ಲಿಯನ್ ಕ್ರಿಸ್ಟೋಫರ್ ಮೊಲಿನಾ ಎಂಬ 22 ವರ್ಷದ ವ್ಯಕ್ತಿಯೊಂದಿಗೆ ಸೇರಿ ಈ ಸಂಚು ರೂಪಿಸಿದ್ದ. ಇಸ್ಲಾಮಿಕ್ ಸ್ಟೇಟ್ ಸಂಘಟನೆ ಪರವಾಗಿ ದೇಶ ಮತ್ತು ವಿದೇಶಗಳಲ್ಲಿ ಬಾಂಬ್ ದಾಳಿ ನಡೆಸಲು ಬಾಂಬ್ ತಯಾರಿಕೆ ತರಬೇತಿಯನ್ನೂ ಪಡೆದಿದ್ದ. ಅಲ್ಲದೆ ಉಗ್ರ ಸಂಘಟನೆಗೆ ಸೇರಲು ವ್ಯಕ್ತಿಗಳನ್ನು ಉತ್ತೇಜಿಸುತ್ತಿದ್ದುದಾಗಿ ಆತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.