ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶ | ಕಂಟೇನರ್ ಸ್ಫೋಟ, ಬೆಂಕಿ: 49 ಸಾವು

300 ಮಂದಿಗೆ ಗಾಯ
Last Updated 5 ಜೂನ್ 2022, 19:31 IST
ಅಕ್ಷರ ಗಾತ್ರ

ಢಾಕಾ: ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿರುವ ರಾಸಾಯನಿಕ ಕಂಟೇನರ್ ಡಿಪೋದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಸ್ಫೋಟ ಮತ್ತು ಬೆಂಕಿ ಅವಘಡದಲ್ಲಿ 49 ಜನರು ಮೃತಪಟ್ಟಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಕದಂರಸೂಲ್‌ನಲ್ಲಿರುವ ಬಿ.ಎಂ.ಕಂಟೇನರ್ ಡಿಪೋದಲ್ಲಿ ಈ ದುರಂತ ಸಂಭವಿಸಿದೆ. ‘49 ಜನ ಸತ್ತಿದ್ದಾರೆ. ಗಾಯಾಳುಗಳನ್ನು ಸಿಎಂಸಿಎಚ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಸಂಖ್ಯೆ ಹೆಚ್ಚುವ ಸಂಭವವಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿ 11.45ರ ವೇಳೆಗೆ ಭಾರಿ ಸ್ಫೋಟ ಉಂಟಾಗಿದೆ. ರಾಸಾಯನಿಕ ಒತ್ತಡದಿಂದಾಗಿ ಬೆಂಕಿ ಒಂದು ಕಂಟೇನರ್‌ನಿಂದ ಇನ್ನೊಂದು ಕಂಟೇನರ್‌ಗೆ ತ್ವರಿತಗತಿಯಲ್ಲಿ ವ್ಯಾಪಿಸಿದೆ ಎಂದು ಪೊಲೀಸ್ ಸಬ್ಇನ್‌ಸ್ಪೆಕ್ಟರ್ ನೂರುಲ್ ಅಲಂ ತಿಳಿಸಿದರು.

ಸ್ಫೋಟದ ತೀವ್ರತೆ ಪರಿಣಾಮ ಆಸುಪಾಸಿನ ಕಟ್ಟಡಗಳ ಮೇಲೂ ಉಂಟಾಗಿದ್ದು, ಸುಮಾರು 4 ಕಿ.ಮೀವರೆಗೂ ಮನೆ, ಕಟ್ಟಡಗಳ ಕಿಟಕಿ ಗಾಜುಗಳು ಪುಡಿಯಾಗಿವೆ ಎಂದು ತಿಳಿಸಿದರು.

ಹೈಡ್ರೋಜನ್ ಪೆರೊಕ್ಸೈಡ್ ಸೇರಿ ಹಲವು ರಾಸಾಯನಿಕಗಳನ್ನು ಡಿಪೋದಲ್ಲಿ ಸಂಗ್ರಹಿಸಿಡಲಾಗಿತ್ತು ಎಂದು ಅಗ್ನಿಶಾಮಕಸೇವೆಯ ಮುಖ್ಯ ಬ್ರಿಗೇಡಿಯರ್ ಜನರಲ್ ಮಹಮ್ಮದ್‌ ಮೈನುದ್ದೀನ್ ತಿಳಿಸಿದರು.

‘ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಒದಗಿಸಲಿದ್ದು, ಪರಿಹಾರ ನೀಡಲಾಗುವುದು. ಮೃತರ ಕುಟುಂಬದ ಹೊಣೆಯನ್ನು ಸಂಸ್ಥೆ ವಹಿಸಲಿದೆ’ ಎಂದು ಬಿಎಂ ಕಂಟೇನರ್ ಡಿಪೋ ನಿರ್ದೇಶಕ ಮುಜಿಬುರ್ ರಹಮಾನ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT