ಬುಧವಾರ, ಜೂನ್ 23, 2021
30 °C

Covid-19 World Update: ಮೆಕ್ಸಿಕೊದಲ್ಲಿ ಮೃತರ ಸಂಖ್ಯೆ 3.21 ಲಕ್ಷ!

ಎಪಿ Updated:

ಅಕ್ಷರ ಗಾತ್ರ : | |

Prajavani

ಮೆಕ್ಸಿಕೊ ಸಿಟಿ: ‘ದೇಶದಲ್ಲಿ ಕೋವಿಡ್‌ನಿಂದಾಗಿ ಒಟ್ಟು 3.21 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಮೆಕ್ಸಿಕೊ ಸರ್ಕಾರ ಶನಿವಾರ ಖಚಿತಪಡಿಸಿದೆ. ಇದು ಅಧಿಕೃತ–ಪರೀಕ್ಷೆಯು ದೃಢೀಕರಿಸಿದ ಸಾವಿಗಿಂತ ಶೇಕಡ 60 ರಷ್ಟು ಹೆಚ್ಚಿದೆ’ ಎಂದು ಸರ್ಕಾರ ತಿಳಿಸಿದೆ.

‘2,01,429 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಅಧಿಕೃತ–ಪರೀಕ್ಷೆ ದೃಢೀಕರಿಸಿದೆ. ಆದರೆ ಮೆಕ್ಸಿಕೊದ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ಹೋಗಿವೆ. ಹಾಗಾಗಿ ಮೆಕ್ಸಿಕೊದಲ್ಲಿ ಕಡಿಮೆ ಕೋವಿಡ್‌ ಪರೀಕ್ಷೆಗಳು ನಡೆಸಲಾಗಿದೆ. 2,01,429 ಮಂದಿಯನ್ನು ಹೊರತುಪಡಿಸಿ ಹಲವಾರು ಜನರು ಪರೀಕ್ಷೆಗೆ ಒಳಗಾಗದೇ ಮನೆಯಲ್ಲೇ ಸಾವಿಗೀಡಾಗಿದ್ದಾರೆ. ‘ಹೆಚ್ಚುವರಿ ಸಾವು’ ಮತ್ತು ‘ಮರಣ ಪತ್ರ’ಗಳ ಸರಿಯಾದ ಪರಿಶೀಲನೆಯಿಂದ ಮಾತ್ರ ಒಟ್ಟು ಸಾವಿನ ಪ್ರಮಾಣದ ಬಗ್ಗೆ ಸ್ಪಷ್ಟ ಮಾಹಿತಿ ಸಿಗಬಹುದು’  ಎಂದು ಸರ್ಕಾರ ಹೇಳಿದೆ.

ಕೊರೊನಾ ಪಿಡುಗು ಆರಂಭಗೊಂಡ ದಿನದಿಂದ ಫೆಬ್ರುವರಿ 14ರ ತನಕ ಒಟ್ಟು 2,94,287 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಫೆಬ್ರುವರಿ 15ರ ಬಳಿಕ ಹೆಚ್ಚುವರಿಯಾಗಿ 26,772 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕೃತ ಪರೀಕ್ಷೆ ದೃಢೀಕರಿಸಿದೆ ಎಂಬ ವರದಿಯನ್ನು ಸರ್ಕಾರ ಶನಿವಾರ ಪ್ರಕಟಿಸಿದೆ.

ಅಮೆರಿಕದಲ್ಲಿ ಅತಿ ಹೆಚ್ಚು ಜನರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ಸಾವಿಗೀಡಾದವರ ಸಂಖ್ಯೆಯಲ್ಲಿ ಬ್ರೆಜಿಲ್‌ ಎರಡನೇ ಸ್ಥಾನದಲ್ಲಿದೆ. ಆದರೆ ಈ ರಾಷ್ಟ್ರಗಳಿಗೆ ಹೋಲಿಸಿದರೆ ಮೆಕ್ಸಿಕೊ ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. ಮೆಕ್ಸಿಕೊದ ಒಟ್ಟು ಜನಸಂಖ್ಯೆ 12.6 ಕೋಟಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು