ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಜೊತೆ ಚೆಲ್ಲಾಟ: ಬಿಲ್‌ ಗೇಟ್ಸ್‌ಗೆ 2008ರಲ್ಲೇ ಎಚ್ಚರಿಕೆ ನೀಡಿತ್ತು ಕಂಪನಿ!

Last Updated 19 ಅಕ್ಟೋಬರ್ 2021, 11:58 IST
ಅಕ್ಷರ ಗಾತ್ರ

ರೆಡ್ಮಂಡ್: ಮಹಿಳಾ ಉದ್ಯೋಗಿಗೆ ಚೆಲ್ಲಾಟದ (ಫ್ಲರ್ಟಿಂಗ್‌) ಇಮೇಲ್ ಕಳುಹಿಸುವುದನ್ನು ನಿಲ್ಲಿಸುವಂತೆ ಮೈಕ್ರೋಸಾಫ್ಟ್ ಕಾರ್ಯನಿರ್ವಾಹಕರು 2008ರಲ್ಲೇ ಬಿಲ್‌ ಗೇಟ್ಸ್‌ ಅವರಿಗೆ ಎಚ್ಚರಿಕೆ ನೀಡಿದ್ದರು. ಇಮೇಲ್‌ ಕಳಿಸುವುದನ್ನು ನಿಲ್ಲಿಸುವುದಾಗಿ ಗೇಟ್ಸ್‌ ಹೇಳಿದ ನಂತರ ಆ ವಿಷಯ ಕೈಬಿಡಲಾಯಿತು ಎಂದು ಕಂಪನಿ ಹೇಳಿದೆ.

ಉದ್ಯೋಗಿಗೆ ಅಸಮಂಜಸವಾದ ಇಮೇಲ್‌ಗಳನ್ನು ಕಳುಹಿಸಿದ್ದನ್ನು ಕಂಪನಿ ಪತ್ತೆಹಚ್ಚಿದ ನಂತರ ಕಂಪನಿಯ ಪ್ರಧಾನ ಸಲಹೆಗಾರ ಮತ್ತು ಈಗಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಇನ್ನೊಬ್ಬ ಕಾರ್ಯನಿರ್ವಾಹಕರು ಗೇಟ್ಸ್ ಅವರನ್ನು ಭೇಟಿಯಾಗಿದ್ದರು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯರು ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಗೇಟ್ಸ್ ಮತ್ತು ಮಹಿಳಾ ಉದ್ಯೋಗಿ ನಡುವೆ ಯಾವುದೇ ದೈಹಿಕ ಸಂಬಂಧ ಇರದಿದ್ದ ಕಾರಣಕ್ಕೆ ಕ್ರಮ ತೆಗೆದುಕೊಳ್ಳಲು ಕಂಪನಿ ಮುಂದಾಗಲಿಲ್ಲ. ಇಮೇಲ್‌ ಸಂದೇಶ ವಿನಿಮಯ ಮಾಡಿಕೊಂಡಿರುವುದನ್ನು ಗೇಟ್ಸ್‌ ನಿರಾಕರಿಸಿಲ್ಲ ಎಂದು ಪತ್ರಿಕೆ ತಿಳಿಸಿದೆ.

ವಾಲ್ ಸ್ಟ್ರೀಟ್ ಜರ್ನಲ್ ವರದಿಯನ್ನು ಖಚಿತಪಡಿಸಿರುವುದನ್ನು ಹೊರತುಪಡಿಸಿ, ಹೆಚ್ಚಿನ ಪ್ರತಿಕ್ರಿಯೆ ನೀಡಲು ಮೈಕ್ರೋಸಾಫ್ಟ್ ಸೋಮವಾರ ನಿರಾಕರಿಸಿದೆ. ಈ ಆಪಾದನೆಗಳು ಸುಳ್ಳು ಎಂದುಗೇಟ್ಸ್‌ ಅವರ ಖಾಸಗಿ ಕಚೇರಿ ತಿಳಿಸಿದೆ. ಇದೇ ಪ್ರಕರಣದ ಹಿನ್ನೆಲೆಯಲ್ಲಿ ಬಿಲ್‌ ಗೇಟ್ಸ್‌ ದಂಪತಿ ಈಚೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT