ಬುಧವಾರ, ಮೇ 18, 2022
23 °C

ಅಮೆರಿಕ: ಮನೆಯೊಂದರ ಕೆಳಗೆ ಇದ್ದ 90ಕ್ಕೂ ಹೆಚ್ಚು ವಿಷಸರ್ಪಗಳ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಯಾನ್‌ ಫ್ರಾನ್ಸಿಸ್ಕೊ, ಅಮೆರಿಕ: ಉತ್ತರ ಕ್ಯಾಲಿಫೋರ್ನಿಯಾದಲ್ಲಿರುವ ಮಹಿಳೆಯೊಬ್ಬರ ಮನೆಯ ಅಡಿಯಲ್ಲಿ ಇತ್ತೀಚಿಗೆ 90 ಕ್ಕೂ ಹೆಚ್ಚು ವಿಷ ಸರ್ಪಗಳು ಕಾಣಿಸಿಕೊಂಡಿದ್ವವು. ಹಾವುಗಳು  ಸುಪ್ತಸ್ಥಿತಿಯಲ್ಲಿರುವುದನ್ನು ಕಂಡು ಹೌಹಾರಿದ ಮಹಿಳೆ, ತಕ್ಷಣ ಉರಗ ತಜ್ಞ ಅಲ್‌ ವುಲ್ಫ್‌ ಅವರಿಗೆ ದೂರವಾಣಿ ಕರೆ ಮಾಡಿ, ನೆರವು ಕೋರಿದ್ದಾರೆ.

ಸೊನಾಮಾ ಕೌಂಟಿ ಸರೀಸೃಪ ರಕ್ಷಣೆ ಸಂಸ್ಥೆಯ ನಿರ್ದೇಶಕರಾದ ವೋಲ್ಫ್ ಅವರು ಸಾಂತಾ ರೋಸಾದಲ್ಲಿರುವ ಮನೆಗೆ ಧಾವಿಸಿದರು. ಅಲ್ಲಿ ಕಾಲಿಡುತ್ತಿದ್ದಂತೆ ಅವರಿಗೆ ಒಂದು ಹಾವು ಕಾಣಿಸಿತು. ನಂತರ ಸಾಲು ಸಾಲು ಹಾವುಗಳು ಕಾಣಿಸಿದವು ಎಂದು ಮೂಲಗಳು ಹೇಳಿವೆ.

ಅವರು ಉದ್ದವಾದ ಕೈಗವಸುಗಳನ್ನು ಧರಿಸಿ ಎರಡು ಬಕೆಟ್‌ಗಳನ್ನು ಹಿಡಿದು ಮನೆಯ ಅಡಿಯಲ್ಲಿ ಹೋದರು. 200ಕ್ಕೂ ಹೆಚ್ಚು ಸಣ್ಣ ಸಣ್ಣ ಬಂಡೆಗಳನ್ನು ಹಿಡಿದು ತೆವಳುತ್ತ ಸಾಗಿದರು.  

‘ನಾಲ್ಕು ಗಂಟೆಗಳ ಕಾಲ ನಾನು ಹಾವುಗಳನ್ನು ಹುಡುಕುತ್ತಲೇ ಇದ್ದೆ. ಅಲ್ಲಿ ಜೇಡರ ಬಲೆಗಳು, ದೂಳು, ಕೊಳಕು ಮತ್ತು ದುರ್ಗಂಧ ತುಂಬಿತ್ತು’ ಎಂದು  ಅವರು ಹೇಳಿದರು.  

‘ಮೊದಲು ಆ ಮನೆಗೆ ಭೇಟಿ ನೀಡಿದಾಗ 22 ಹಾವುಗಳು ಹಾಗೂ 59 ಹಾವಿನ ಹಾವುಗಳನ್ನು ಹಿಡಿದಿದ್ದೆ. ಕೆಲ ದಿನಗಳ ನಂತರ ಮತ್ತೆ ಹೋದ ಸಂದರ್ಭದಲ್ಲಿ 11 ಹಾವುಗಳನ್ನು ಹಿಡಿದೆ’ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು