ಸೋಮವಾರ, ಮೇ 17, 2021
29 °C

ಮ್ಯಾನ್ಮಾರ್: 23 ಸಾವಿರಕ್ಕೂ ಹೆಚ್ಚು ಕೈದಿಗಳಿಗೆ ಕ್ಷಮಾದಾನ

ಎಪಿ Updated:

ಅಕ್ಷರ ಗಾತ್ರ : | |

Prajavani

ಯಾಂಗೂನ್: ಹೊಸ ವರ್ಷಾಚರಣೆಯ ರಜಾದಿನದ ಅಂಗವಾಗಿ 23ಸಾವಿರಕ್ಕೂ ಹೆಚ್ಚು ಕೈದಿಗಳಿಗೆ ಕ್ಷಮಾದಾನ ನೀಡಿ, ಬಿಡುಗಡೆಗೊಳಿಸಲು ಮ್ಯಾನ್ಮಾರ್‌ ಸೇನಾಡಳಿತ ನಿರ್ಧರಿಸಿದೆ.

ಆದರೆ, ಈ ವೇಳೆ ಸೇನಾ ಆಡಳಿತ ವಿರೋಧಿಸಿ ನಡೆದ ಪ್ರತಿಭಟನೆಗಳಲ್ಲಿ ಬಂಧಿಸಲಾಗಿರುವ ಪ್ರಜಾಪ್ರಭುತ್ವ ಪರ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲಾಗುತ್ತದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

‘ಸೇನಾ ನಾಯಕ, ಹಿರಿಯ ಜನರಲ್‌ ಮಿನ್‌ ಆಂಗ್‌ ಲೈಂಗ್‌ ಅವರು  137 ವಿದೇಶಿಯರು ಸೇರಿದಂತೆ 23,047 ಕೈದಿಗಳಿಗೆ ಕ್ಷಮಾದಾನ ನೀಡಿದ್ದಾರೆ. ಬಿಡುಗಡೆಯಾಗಲಿರುವ ವಿದೇಶಿ ಕೈದಿಗಳನ್ನು ಮ್ಯಾನ್ಮಾರ್‌ನಿಂದ ಗಡಿಪಾರು ಮಾಡಲಾಗುವುದು. ಅಲ್ಲದೆ ಮಿನ್‌ ಆಂಗ್‌ ಲೈಂಗ್‌ ಅವರು ಇತರೆ ಕೈದಿಗಳಿಗೆ ಶಿಕ್ಷೆಯ ಅವಧಿಯನ್ನು ಕೂಡ ಕಡಿಮೆಗೊಳಿಸಿದ್ದಾರೆ’ ಎಂದು ಸರ್ಕಾರಿ ಸ್ವಾಮ್ಯದ  ಎಂಆರ್‌ಟಿವಿಯಲ್ಲಿ ಹೇಳಿಕೆ ಪ್ರಕಟಿಸಲಾಗಿದೆ.

ಈ ಹಿಂದೆಯೂ ಸೇನೆಯು ಹಲವು ಪ್ರಮುಖ ರಜಾದಿನಗಳ ಸಂದರ್ಭಗಳಲ್ಲಿ ಕೈದಿಗಳಿಗೆ ಕ್ಷಮಾದಾನ ನೀಡಿತ್ತು. ಆದರೆ ಇದು ನಾಯಕಿ ಆಂಗ್ ಸಾನ್ ಸೂಕಿ ಪದಚ್ಯುತಗೊಳಿಸಿದ ಬಳಿಕ ನಡೆದ ಎರಡನೇ ಕ್ಷಮಾದಾನವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು