ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌: ಸೇನಾ ಹಿಂಸಾಚಾರದಲ್ಲಿ ಈವರೆಗೆ 300ಕ್ಕೂ ಹೆಚ್ಚು ಮಂದಿ ಸಾವು

ಎರಡು ಸರ್ಕಾರಿ ಕಂಪನಿಗಳ ವಿರುದ್ಧ ಅಮೆರಿಕ, ಬ್ರಿಟನ್‌ ನಿರ್ಬಂಧ
Last Updated 26 ಮಾರ್ಚ್ 2021, 13:00 IST
ಅಕ್ಷರ ಗಾತ್ರ

ಯಾಂಗೂನ್: ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯು ತೀವ್ರಗೊಂಡಿದ್ದು, ಇದುವರೆಗೆ ಸೇನಾ ಹಿಂಸಾಚಾರದಲ್ಲಿ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

‘ಈ ಸೇನಾ ಹಿಂಸಾಚಾರದಲ್ಲಿ 320 ಮಂದಿ ಮೃತಪಟ್ಟಿದ್ದಾರೆ’ ಎಂದು ಮ್ಯಾನ್ಮಾರ್‌ನ ರಾಜಕೀಯ ಕೈದಿಗಳ ಸಂಘಟನೆ ತಿಳಿಸಿದೆ.

‘ಸೇನಾ ಹಿಂಸಾಚಾರದಿಂದಾಗಿ ಗುರುವಾರ 11 ಮಂದಿ ಮೃತಪಟ್ಟಿದ್ದಾರೆ. ಅದರ ಹಿಂದಿನ ದಿನವೂ 23 ಮಂದಿ ಸಾವಿಗೀಡಾಗಿದ್ದರು. ಫೆಬ್ರುವರಿ 1ರಿಂದ ಗುರುವಾರದವರೆಗೆ ಒಟ್ಟು 2,981 ಮಂದಿಯನ್ನು ಬಂಧಿಸಲಾಗಿದೆ’ ಎಂದು ಸಂಘಟನೆ ಹೇಳಿದೆ.

ಮ್ಯಾನ್ಮಾರ್‌ನ ಸೇನಾ ಒಡೆತನದ ಪ್ರಮುಖ ಎರಡು ಕಂಪನಿಗಳ ವಿರುದ್ಧ ಕಠಿಣ ನಿರ್ಬಂಧ ಹೇರುವುದಾಗಿ ಅಮೆರಿಕ ಮತ್ತು ಬ್ರಿಟನ್‌ ಘೋಷಿಸಿವೆ.

‘ಮ್ಯಾನ್ಮಾ ಎಕನಾಮಿಕ್ ಹೋಲ್ಡಿಂಗ್ಸ್‌ ಪಬ್ಲಿಕ್‌ ಕಂಪನಿ ಲಿಮಿಟೆಡ್‌ ಮತ್ತು ಮ್ಯಾನ್ಯಾರ್‌ ಎಕನಾಮಿಕ್‌ ಕಾಪೋರೇಷನ್‌ ಲಿಮಿಟೆಟ್ ವಿರುದ್ಧ ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ಎರಡು ಕಂಪನಿಗಳು ಮ್ಯಾನ್ಮಾರ್‌ ಸೇನೆಯ ಹಣಕಾಸಿನ ಪ್ರಮುಖ ಮೂಲಗಳಾಗಿವೆ’ ಎಂದು ಅಮೆರಿಕದ ಖಜಾನೆ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT