ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿಗಳ ಮೇಲಿನ ಇನ್‌ಸ್ಟ್ರಾನಾಸಲ್ ಕೋವಿಡ್‌ ಲಸಿಕೆ ಪ್ರಯೋಗ ಯಶಸ್ವಿ

Last Updated 12 ಜುಲೈ 2021, 7:50 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಹೊಸ ಇನ್‌ಸ್ಟ್ರಾನಾಸಲ್ ಕೋವಿಡ್‌ ಲಸಿಕೆಯ ಒಂದು ಡೋಸ್‌ (ಮೂಗಿನ ಮೂಲಕ ನೀಡುವ ಲಸಿಕೆ) ಮಾರಣಾಂತಿಕ ಸೋಂಕಿನಿಂದ ಇಲಿಗೆ ರಕ್ಷಣೆ ನೀಡುತ್ತದೆ ಮತ್ತು ಪ್ರಾಣಿಗಳಿಗೆ 'ಸಾರ್ಸ್-ಕೋವ್-2'ಸೋಂಕು ಹರಡದಂತೆ ತಡೆಯುವುದನ್ನು ತೋರಿಸಿಕೊಟ್ಟಿದೆ’ ಎಂದು ಅಧ್ಯಯನವೊಂದು ತಿಳಿಸಿದೆ.

ಈ ಲಸಿಕೆಯನ್ನು ಮೂಗಿನ ಮೇಲೆ ಸಿಂಪಡಿಸುವ ಮೂಲಕ ನೀಡಲಾಗುವುದು. ಇದು ಇನ್‌ಫ್ಲೂನ್ಜಾದಂತಹ ರೋಗಗಳಿಗೆ ನೀಡಲಾಗುವ ಲಸಿಕೆಗೆ ಹೋಲುತ್ತದೆ ಎಂದು ತಿಳಿಸಲಾಗಿದ್ದು, ಚುಚ್ಚುಮದ್ದಿನ ಮೂಲಕ ಇದೀಗ ನೀಡಲಾಗುತ್ತಿರುವ ಕೋವಿಡ್‌ ಲಡಿಕೆಗೆ ಇದು ಪರ್ಯಾಯವಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

‘ಕೋವಿಡ್‌–19 ವಿರುದ್ಧ ಪ‍್ರಸ್ತುತ ಲಭ್ಯವಿರುವ ಲಸಿಕೆಗಳು ಯಶಸ್ವಿಯಾಗಿವೆ. ಆದರೆ, ವಿಶ್ಚದಲ್ಲಿ ಬಹುತೇಕ ಜನರು ಇನ್ನೂ ಲಸಿಕೆ ಪಡೆದಿಲ್ಲ. ಹಾಗಾಗಿ ಸೋಂಕಿನ ಪ್ರಸರಣವನ್ನು ತಡೆಯುವ ಪರಿಣಾಮಕಾರಿ ಮತ್ತು ಬಳಸಲು ಸುಲಭವಾದ ಲಸಿಕೆಯ ಅವಶ್ಯಕತೆ ಇದೆ’ ಎಂದು ಅಮೆರಿಕದ ಜಾರ್ಜಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೌಲ್‌ ಮೆಕ್‌ಕ್ರೇ ಅವರು ತಿಳಿಸಿದರು.

‘ಒಂದು ವೇಳೆ ಈ ಹೊಸ ಕೋವಿಡ್‌ ಲಸಿಕೆಯು ಜನರ ಮೇಲೆ ಪರಿಣಾಮಕಾರಿಯಾಗಿದ್ದರೆ, ಇದು 'ಸಾರ್ಸ್-ಕೋವ್-2' ಪ್ರಸರಣವನ್ನು ತಡೆಯಬಹುದು. ಆಗ ಕೋವಿಡ್ ಪಿಡುಗನ್ನು ನಿಯಂತ್ರಿಸಬಹುದು’ ಎಂದು ಅಧ್ಯಯನದ ಸಹ ನಾಯಕನಾಗಿರುವ ಪೌಲ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT