ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಭದ್ರತೆ: ಸಮಸ್ಯೆ ಪರಿಹಾರಕ್ಕೆ ಸಂಘಟನಾತ್ಮಕ ಪ್ರಯತ್ನ ಅಗತ್ಯ- ಆರ್‌. ರವೀಂದ್ರ

Last Updated 20 ಏಪ್ರಿಲ್ 2022, 13:01 IST
ಅಕ್ಷರ ಗಾತ್ರ

ನ್ಯೂಯಾರ್ಕ್‌:‘ರಷ್ಯಾ ಮತ್ತು ಉಕ್ರೇನ್‌ ಮಧ್ಯೆ ನಡೆಯುತ್ತಿರುವ ಯುದ್ಧದಿಂದ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆಹಾರ ಮತ್ತು ಇಂಧನದ ಬೆಲೆ ಏರಿಕೆ ಆಗುತ್ತಿದೆ. ಆದ್ದರಿಂದ ಇಂಧನ ಭದ್ರತೆ ಒಂದು ಗಂಭೀರ ವಿಷಯವಾಗಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಸಹಕಾರದ ಪ್ರಯತ್ನ ಬೇಕಿದೆ’ ಎಂದು ವಿಶ್ವಸಂಸ್ಥೆಯ ಭಾರತದ ಉಪ ಕಾಯಂ ಪ್ರತಿನಿಧಿ ಆರ್‌. ರವೀಂದ್ರ ಹೇಳಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್‌ನಲ್ಲಿ ಮಾನವೀಯ ಪರಿಸ್ಥಿತಿಗಳ ಕುರಿತು ನಡೆದ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ರವೀಂದ್ರ, ‘ವಿಶ್ವಸಂಸ್ಥೆಯ ಒಳಗೆ ಹಾಗೂ ಹೊರಗೆ ರಚನಾತ್ಮವಾಗಿ ಕೆಲಸ ಮಾಡುವುದು ನಮ್ಮ ಸಾಮೂಹಿಕ ಹಿತಾಸಕ್ತಿಯಾಗಿದ್ದು, ಶೀಘ್ರವಾಗಿ ಆಹಾರ ಹಾಗೂ ಇಂಧನ ಕೊರತೆ ಸಮಸ್ಯೆಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳುವ ಕಡೆ ಗಮನ ಹರಿಸಬೇಕಿದೆ’ ಎಂದು ತಿಳಿಸಿದರು.

ಉಕ್ರೇನ್‌ನಲ್ಲಿ ಮಾನವೀಯ ಪರಿಸ್ಥಿತಿಗಳ ಬಗ್ಗೆ ಮಾತನಾಡಿದ ಅವರು, ‘ಅತ್ಯಗತ್ಯವಾದ ಮಾನವೀಯ ಹಾಗೂ ವೈದ್ಯಕೀಯ ಸೌಲಭ್ಯವನ್ನು ಸುರಕ್ಷಿತವಾಗಿ ಉಕ್ರೇನ್‌ಗೆ ರವಾನಿಸುವ ಕ್ರಮಗಳನ್ನು ಭಾರತವು ಬೆಂಬಲಿಸುತ್ತದೆ. ಮಾನವೀಯ ಅಗತ್ಯಗಳಿಗೆ ಅಂತರರಾಷ್ಟ್ರೀಯ ಸಮುದಾಯ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ನಾವು ಭಾವಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT