ಮಂಗಳವಾರ, ಏಪ್ರಿಲ್ 13, 2021
28 °C

ಶ್ವೇತ ಭವನ: ಬಜೆಟ್ ವಿಭಾಗ ನಿಭಾಯಿಸುವ ಸ್ಥಾನದ ನಾಮನಿರ್ದೇಶನ ಹಿಂಪಡೆದ ನೀರಾ ತಂಡನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಶ್ವೇತ ಭವನದ ಬಜೆಟ್‌ ನಿರ್ವಹಣಾ ಕಚೇರಿಯ ನಿರ್ದೇಶಕಿ ಸ್ಥಾನದ ನಾಮನಿರ್ದೇಶವನ್ನು ಭಾರತೀಯ–ಅಮೆರಿಕನ್‌ ನೀರಾ ತಂಡನ್‌ ಮಂಗಳವಾರ ಹಿಂಪಡೆದಿದ್ದಾರೆ. ಸೆನೆಟ್‌ನಲ್ಲಿ ನೀರಾ ಅವರ ಸ್ಥಾನ ಖಚಿತ ಪಡಿಸುವಷ್ಟು ಮತಗಳನ್ನು ಪಡೆಯುವಲ್ಲಿ ಆಡಳಿತಾರೂಢ ಪಕ್ಷ ವಿಫಲವಾಗಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ಹಿನ್ನಡೆಯಾಗಿದೆ.

ಆಡಳಿತದಲ್ಲಿರುವ ಡೆಮಾಕ್ರಟಿಕ್‌ ಪಕ್ಷದ ಸದಸ್ಯರಿಂದಲೂ ನೀರಾ ತಂಡನ್‌ (50) ನಾಮನಿರ್ದೇಶನಕ್ಕೆ ವಿರೋಧ ವ್ಯಕ್ತವಾಗಿತ್ತು. ನಾಮನಿರ್ದೇಶನ ಹಿಂಪಡೆಯುವ ನಿರ್ಧಾರವನ್ನು ಬೈಡನ್‌ ಸ್ವೀಕರಿಸಿದ್ದು, ತಂಡನ್‌ ಅವರನ್ನು ಬೇರೊಂದು ಸ್ಥಾನದ ಮೂಲಕ ಆಡಳಿತದಲ್ಲಿ ಸೇರಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉನ್ನತ ಸ್ಥಾನಗಳಿಗೆ ಬೈಡನ್‌ ನಾಮನಿರ್ದೇಶಿತರ ಪೈಕಿ ಮೊದಲ ಹಿನ್ನಡೆ ಎದುರಾಗಿದೆ. ಸಂಪುಟದ 23 ನಾಮನಿರ್ದೇಶನಗಳ ಪೈಕಿ 11 ಸ್ಥಾನಗಳಿಗೆ ಸೆನೆಟ್‌ನ ಅನುಮೋದನೆ ದೊರೆತಿದೆ, ಬಹುತೇಕ ಸ್ಥಾನಗಳಿಗೆ ಉಭಯ ಪಕ್ಷಗಳ ಸದಸ್ಯರ ಬೆಂಬಲ ಸಿಕ್ಕಿದೆ.

ರಿಪಬ್ಲಿಕನ್‌ ಮತ್ತು ಡೆಮಾಕ್ರಟಿಕ್‌ ಪಕ್ಷದ ಸೆನೆಟರ್‌ಗಳನ್ನು ಟೀಕಿಸಿ ಮಾಡಿದ್ದ ಹಲವು ಟ್ವೀಟ್‌ಗಳು ಈಗ ನೀರಾ ತಂಡನ್‌ ಅವರ ನಾಮನಿರ್ದೇಶನಕ್ಕೆ ಅಡ್ಡಿಯಾಗಿವೆ. ಸೆನೆಟ್‌ ಅನುಮೋದಿಯ ಸಮಯದಲ್ಲಿ ಹಲವು ಸೆನೆಟರ್‌ಗಳು ನೀರಾ ವಿರುದ್ಧ ಮತ ಚಲಾಯಿಸಲು ಮುಂದಾದರು.

ನಾಮನಿರ್ದೇಶನದ ಬಳಿಕ ನೀರಾ 1,000ಕ್ಕೂ ಹೆಚ್ಚು ಟ್ವೀಟ್‌ಗಳನ್ನು ಅಳಿಸಿ ಹಾಕಿದ್ದಾರೆ ಎಂದು ವರದಿಯಾಗಿತ್ತು. ಕಳೆದ ತಿಂಗಳು ಸೆನೆಟರ್‌ಗಳಲ್ಲಿ ನೀರಾ ಕ್ಷಮೆಯಾಚಿಸಿದ್ದರು.

'ಬಜೆಟ್‌ ವಿಭಾಗವನ್ನು ಮುನ್ನಡೆಸಬಲ್ಲ ಏಕೈಕ ಅಭ್ಯರ್ಥಿ ನೀರಾ ಟಂಡನ್‌' ಎಂಬ ಅಭಿಪ್ರಾಯವೂ ಶ್ವೇತ ಭವನದಲ್ಲಿ ವ್ಯಕ್ತವಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು