ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಎವರೆಸ್ಟ್‌' ಪರಿಷ್ಕೃತ ಎತ್ತರ: ಜಂಟಿ ಹೇಳಿಕೆ ಬಿಡುಗಡೆ ಮಾಡಲಿರುವ ಚೀನಾ, ನೇಪಾಳ

Last Updated 7 ಡಿಸೆಂಬರ್ 2020, 16:02 IST
ಅಕ್ಷರ ಗಾತ್ರ

ಕಠ್ಮಂಡು: ಜಗತ್ತಿನ ಅತ್ಯುನ್ನತ ಶಿಖರ ಮೌಂಟ್‌ ಎವರೆಸ್ಟ್‌ನ ಪರಿಷ್ಕೃತ ಎತ್ತರದ ಬಗ್ಗೆ ಚೀನಾ ಮತ್ತು ನೇಪಾಳ ಸರ್ಕಾರಗಳು ಜಂಟಿ ಹೇಳಿಕೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಎವರೆಸ್ಟ್‌ ಪರ್ವತವು ಒಟ್ಟು 8,848 ಮೀಟರ್ ಎತ್ತರವಿದೆ ಎಂದು 1954ರಲ್ಲಿ ಸರ್ವೆ ಆಫ್‌ ಇಂಡಿಯಾ ತಿಳಿಸಿತ್ತು.

2015ರಲ್ಲಿ ಸಂಭವಿಸಿದ್ದ ಭೂಕಂಪನದಿಂದಾಗಿ ಎವರೆಸ್ಟ್‌ ಪರ್ವತ ಕುಸಿದಿದ್ದು ಅದರ ಎತ್ತರವೂ ಕಡಿಮೆಯಾಗಿದೆ ಎಂಬ ಚರ್ಚೆಗಳು ಶುರುವಾಗಿದ್ದವು. ಹೀಗಾಗಿ ನೇಪಾಳ ಸರ್ಕಾರವು ಪರ್ವತದ ನಿಖರ ಎತ್ತರವನ್ನು ಅಳೆಯುವ ಕಾರ್ಯಕ್ಕೆ 2018ರಲ್ಲಿ ಚಾಲನೆ ನೀಡಿತ್ತು.

‘ನೇಪಾಳ ಸರ್ಕಾರವು ಚೀನಾ ಜೊತೆಗೂಡಿ ಎವರೆಸ್ಟ್‌ ಪರ್ವತದ ಪರಿಷ್ಕೃತ ಎತ್ತರದ ಕುರಿತು ಮಂಗಳವಾರ ಹೇಳಿಕೆ ಬಿಡುಗಡೆ ಮಾಡಲಿದೆ. ಇದಕ್ಕೆ ಚೀನಾ ಸರ್ಕಾರವೂ ಒಪ್ಪಿದೆ’ ಎಂದು ನೇಪಾಳದ ಭೂ ನಿರ್ವಹಣೆ, ಸಹಕಾರ ಮತ್ತು ಬಡತನ ನಿವಾರಣೆ ಸಚಿವಾಲಯದ ವಕ್ತಾರ ಸೋಮವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT