ಇಸ್ರೇಲ್ ಹಡಗಿನ ಮೇಲೆ ಇರಾನ್ ದಾಳಿ: ಬೆಂಜಮಿನ್ ನೆತಾನ್ಯಾಹು

ಜೆರುಸಲೇಂ: ಕಳೆದ ವಾರ ಒಮನ್ ಕೊಲ್ಲಿಯಲ್ಲಿ ಇಸ್ರೇಲ್‌ನ ಹಡಗಿನ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಆರೋಪಿಸಿದ್ದಾರೆ.
’ಇಸ್ರೇಲ್‌ನ ಅತಿ ದೊಡ್ಡ ಶತ್ರು ಇರಾನ್. ಇಸ್ರೇಲ್ ಹಡಗಿನ ಮೇಲೆ ದಾಳಿ ನಡೆಸುವ ಕೃತ್ಯವನ್ನು ಸಹ ಇರಾನ್ ಮಾಡಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಇದೆ. ಇರಾನ್‌ನನ್ನು ನಿಯಂತ್ರಿಸಲು ನಾನು ದೃಢಸಂಕಲ್ಪ ಹೊಂದಿದ್ದೇನೆ. ಪ್ರತಿಕಾರ ತೀರಿಸಿಕೊಳ್ಳಲು ದಾಳಿ ನಡೆಸಲಾಗುವುದು’ ಎಂದು ಅವರು ಹೇಳಿದ್ದಾರೆ.
ಸಿಂಗಪುರಕ್ಕೆ ತೆರಳುತ್ತಿದ್ದ ಇಸ್ರೇಲ್ ಒಡೆತನದ ಸರಕು ಸಾಮಗ್ರಿ ಸಾಗಿಸುವ ಎಂ.ವಿ.ಹೆಲಿಯೊಸ್ ರೇ ಹಡಗು ಶುಕ್ರವಾರ ಒಮನ್ ಕೊಲ್ಲಿಯಲ್ಲಿ ನಿಗೂಢ ಸ್ಫೋಟಕ್ಕೆ ಒಳಗಾಗಿತ್ತು. ಈ ಸ್ಫೋಟದಲ್ಲಿ ಸಿಬ್ಬಂದಿಗೆ ಯಾವುದೇ ರೀತಿ ಹಾನಿಯಾಗಿರಲಿಲ್ಲ. ಆದರೆ, ಹಡಗಿಗೆ ಅಲ್ಪ ಪ್ರಮಾಣದ ಹಾನಿಯಾಗಿತ್ತು. ಹೀಗಾಗಿ, ದುರಸ್ತಿಗಾಗಿ ಭಾನುವಾರ ದುಬೈ ಬಂದರಿಗೆ ತರಲಾಗಿತ್ತು.
ಸ್ಫೋಟಕ್ಕೆ ಖಚಿತ ಕಾರಣಗಳು ತಿಳಿದು ಬಂದಿಲ್ಲ. ಮಧ್ಯಪ್ರಾಚ್ಯದಿಂದ ಸಿಂಗಪುರದತ್ತ ಹೊರಡುವ ಮೊದಲು ಈ ಹಡಗು ಪರ್ಷಿಯನ್ ಕೊಲ್ಲಿಯ ವಿವಿಧ ಬಂದರುಗಳಲ್ಲಿ ಹಲವು ಕಾರುಗಳನ್ನು ಇಳಿಸಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.