ನ್ಯೂಜಿಲೆಂಡ್ ಮಸೀದಿ ಮೇಲೆ ಗುಂಡಿನ ದಾಳಿ: ಅಪರಾಧಿಗೆ ಜೀವಾವಧಿ ಶಿಕ್ಷೆ

ಕ್ರೈಸ್ಟ್ಚರ್ಚ್(ನ್ಯೂಜಿಲೆಂಡ್): ಇಲ್ಲಿನ ಎರಡು ಮಸೀದಿಗಳ ಮೇಲೆ ದಾಳಿ ನಡೆಸಿ 51 ಮಂದಿ ಸಾವಿಗೆ ಕಾರಣನಾಗಿದ್ದ ಬ್ರೆಂಟನ್ ಹ್ಯಾರಿಸನ್ ಟ್ಯಾರಂಟ್ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಶುಕ್ರವಾರದ ಪ್ರಾರ್ಥನೆಗೆ ಸೇರಿದ್ದ ಜನಸಮೂಹದ ಮೇಲೆ ಈತ ದಾಳಿ ನಡೆಸಿದ್ದ.
ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶ ಕ್ಯಾಮರೂನ್ ಮಾಂಡರ್ ಅವರು ಆಸ್ಟ್ರೇಲಿಯಾ ಮೂಲದ ಅಪರಾಧಿ 29 ವರ್ಷದ ಬ್ರೆಂಟನ್ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ನಲ್ಲಿ ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ.
‘ಬ್ರೆಂಟನ್ ಅಪರಾಧ ಕ್ರೂರವಾಗಿದೆ. ಆತನ ಅಪರಾಧಕ್ಕೆ ಜೀವಾವಧಿ ಶಿಕ್ಷೆಯೂ ಕಡಿಮೆ. ಒಂದು ಮಾರಕ ಸಿದ್ಧಾಂತಕ್ಕಾಗಿ ಆತ ಹಲವರಿಗೆ ಹಾನಿ ಉಂಟು ಮಾಡಿದ್ದಾನೆ. ಆತ ಅಮಾನವೀಯ ಕೃತ್ಯ ಎಸಗಿದ್ದಾನೆ. ಆ ದಾಳಿಯಲ್ಲಿ ಮೂರು ವರ್ಷದ ಮಗುವು ಕೂಡ ಮೃತಪಟ್ಟಿದೆ’ ಎಂದು ನ್ಯಾಯಾಧೀಶ ಕ್ಯಾಮರೂನ್ ಮಾಂಡರ್ ತಿಳಿಸಿದರು.
2019ರ ಮಾರ್ಚ್ ತಿಂಗಳಲ್ಲಿ ಅಲ್ ನೂರ್ ಮತ್ತು ಲಿನ್ವುಂಡ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆಂದು ಜನ ಸೇರಿದ್ದರು. ಈ ವೇಳೆ ಬ್ರೆಂಟನ್ ಗುಂಡಿನ ದಾಳಿ ನಡೆಸಿದ್ದ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.