ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್‌ನ ಅಮೆರಿಕ ರಾಯಭಾರ ಕಚೇರಿಯಲ್ಲಿದ್ದ 9 ಭಾರತೀಯರು ಕಠ್ಮಂಡುಗೆ ಶಿಫ್ಟ್

Last Updated 17 ಆಗಸ್ಟ್ 2021, 13:25 IST
ಅಕ್ಷರ ಗಾತ್ರ

ಕಠ್ಮಂಡು: ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಒಂಬತ್ತು ಭಾರತೀಯ ಪ್ರಜೆಗಳು ಮತ್ತು 118 ನೇಪಾಳಿ ಪ್ರಜೆಗಳನ್ನು ಚಾರ್ಟರ್ಡ್ ವಿಮಾನದಲ್ಲಿ ಮಂಗಳವಾರ ಅಫ್ಘಾನಿಸ್ತಾನದಿಂದ ಇಲ್ಲಿಗೆ ಕರೆತರಲಾಗಿದೆ.

ಎಲ್ಲಾ 127 ಜನರು ಕಾಬೂಲ್‌ನಿಂದ ಕತಾರ್ ಏರ್ ವಿಮಾನದ ಮೂಲಕ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಟಿಐಎ) ಬಂದಿಳಿದಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.

ಕಾಬೂಲ್‌ನಿಂದ ಅಮೆರಿಕದ ವಾಯುಪಡೆಯ ಸಮನ್ವಯದೊಂದಿಗೆ ಎಲ್ಲರನ್ನು ದೇಶಕ್ಕೆ ಕರೆತರಲಾಯಿತು ಎಂದು ನೇಪಾಳದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೇವಾ ಲಮ್ಸಾಲ್ ಹೇಳಿದ್ದಾರೆ.

ಎಲ್ಲರನ್ನೂ ಮೊದಲುಕತಾರ್‌ ರಾಜಧಾನಿ ದೋಹಾಗೆ ಲಿಫ್ಟ್ ಮಾಡಲಾಯಿತು. ನಂತರ, ಚಾರ್ಟರ್ಡ್ ವಿಮಾನದಲ್ಲಿ ಕಠ್ಮಂಡುವಿಗೆ ಕರೆತರಲಾಗಿದೆ.

118 ನೇಪಾಳದ ಪ್ರಜೆಗಳ ಜೊತೆ ಒಂಬತ್ತು ಭಾರತೀಯರು ಕೂಡ ಆಗಮಿಸಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಕಠ್ಮಂಡು ಪೋಸ್ಟ್ ಪತ್ರಿಕೆ ವರದಿ ಮಾಡಿದೆ.

ಸೇನೆಯ ವೈದ್ಯಕೀಯ ತಂಡವು ಸ್ಥಳಾಂತರಿಸಲ್ಪಟ್ಟವರಿಗೆ ಕೋವಿಡ್ ಪರೀಕ್ಷೆಗಳನ್ನು ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT