ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: 2020ರಲ್ಲೂ ಜನನ ಪ್ರಮಾಣದಲ್ಲಿ ಏರಿಕೆ ಇಲ್ಲ

Last Updated 9 ಫೆಬ್ರುವರಿ 2021, 7:37 IST
ಅಕ್ಷರ ಗಾತ್ರ

ಬೀಜಿಂಗ್: ‘ಒಂದೇ ಮಗು’ ನೀತಿಯಂತಹ ಕಠಿಣ ಕುಟುಂಬ ನಿಯಂತ್ರಣ ಯೋಜನೆಯನ್ನೂ ರದ್ದುಗೊಳಿಸಿದ ನಂತರವೂ ಚೀನಾದಲ್ಲಿ ಜನನ ಪ್ರಮಾಣದಲ್ಲಿ ಏರಿಕೆಯಾಗಿಲ್ಲ.

2019ಕ್ಕೆ ಹೋಲಿಸಿದರೆ ಚೀನಾದಲ್ಲಿ 2020ರಲ್ಲಿ ಜನನ ಪ್ರಮಾಣ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ.‌

ಸೋಮವಾರ ಬಿಡುಗಡೆಯಾದ ಸಾರ್ವಜನಿಕ ಭದ್ರತಾ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2020ರಲ್ಲಿ 1 ಕೋಟಿ ಮಕ್ಕಳು ಜನಿಸಿದ್ದಾರೆ. ಇದು 2019ರಲ್ಲಿ ವರದಿಯಾದ ನೋಂದಾಯಿತ ಜನನ ಪ್ರಮಾಣಕ್ಕಿಂತ ಶೇ 15 ಕಡಿಮೆಯಾಗಿದೆ.

ಅಧಿಕೃತ ಅಂಕಿ ಅಂಶಗಳ ಪ್ರಕಾರ, 2019ರಲ್ಲಿ 1.46 ಕೋಟಿ ಮಕ್ಕಳು ಜನಿಸಿದ್ದಾರೆ. ಇದು ಈ ವಾರದಲ್ಲಿ ವರದಿಯಾಗಿರುವ ಪ್ರಮಾಣಕ್ಕಿಂತ ಶೇ 30ರಷ್ಟು ಹೆಚ್ಚಾಗಿದೆ.

ಈ ಎಲ್ಲ ದತ್ತಾಂಶಗಳು, ಚೀನಾದಲ್ಲಿ ನಿರಂತರವಾಗಿ ನಾಲ್ಕನೇ ವರ್ಷದಲ್ಲೂ ಜನನ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬುದನ್ನು ತೋರಿಸುತ್ತಿದೆ.

‘ಒಂದು ಮಗು ನೀತಿ’ ಜಾರಿಗೊಳಿಸಿದ ದಶಕಗಳ ನಂತರ, ಚೀನಾದಲ್ಲಿ ವಯಸ್ಸಾದವರ ಸಂಖ್ಯೆ ವೇಗವಾಗಿ ಹೆಚ್ಚುತ್ತಾ ಹೋಗಿತು. ಉದ್ಯೋಗಿಗಳ ಸಂಖ್ಯೆ ಕುಗ್ಗುವ ಆತಂಕ ಹೆಚ್ಚಾಯಿತು. ಇದನ್ನು ಮನಗಂಡ ಸರ್ಕಾರ 2016ರಲ್ಲಿ ‘ಒಂದು ಮಗು ನೀತಿ‘ಯನ್ನು ರದ್ದುಗೊಳಿಸಿ, ಒಂದು ಕುಟುಂಬ ಎರಡು ಮಕ್ಕಳನ್ನು ಪಡೆಯಬಹುದೆಂದು ನಿಯಮ ಬದಲಿಸಿತು. ಇದಾದ ನಂತರದಲ್ಲೂ, ಚೀನಾದಲ್ಲಿ ಜನನ ಪ್ರಮಾಣದಲ್ಲಿ ಏರಿಕೆಯಾಗಲಿಲ್ಲ.

ಅಂಕಿಅಂಶಗಳ ಪ್ರಕಾರ ಲಿಂಗಾನುಪಾತದಲ್ಲಿ ಬಾಲಕರು ಶೇ 52.7 ಮತ್ತು ಬಾಲಕಿಯರ ಸಂಖ್ಯೆ ಶೇ 47.3 ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT