ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಸ್ಏಂಜಲೀಸ್‌: 4.3 ತೀವ್ರತೆಯ ಲಘು ಭೂಕಂಪ, ಯಾವುದೇ ಹಾನಿ ಇಲ್ಲ

Last Updated 18 ಸೆಪ್ಟೆಂಬರ್ 2021, 6:40 IST
ಅಕ್ಷರ ಗಾತ್ರ

ಕರ್ಸನ್‌: ಲಾಸ್ಏಂಜಲೀಸ್‌ ಮೆಟ್ರೊಪಾಲಿಟನ್‌ ಪ್ರದೇಶದಲ್ಲಿ ಶುಕ್ರವಾರ ಲಘು ಭೂಕಂಪ ಸಂಭವಿಸಿದೆ. ಆದರೆ,ಯಾವುದೇ ಹಾನಿ ಅಥವಾ ಗಾಯಗಳು ವರದಿಯಾಗಿಲ್ಲ.

‘ಶುಕ್ರವಾರ ರಾತ್ರಿ 7.58 ರ ಬಳಿಕ 4.3 ತೀವ್ರತೆಯಲ್ಲಿ ಭೂಕಂಪನವಾಗಿದೆ. ಕಂಪನದ ಕೇಂದ್ರ ಬಿಂದು ಕರ್ಸನ್‌ನ ಬಳಿ 14 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ’ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ.

ಈ ಪ್ರದೇಶದಲ್ಲಿ ಕೆಲ ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದ್ದು, ಸಂತಾ ಮೊನಿಕಾ, ಟೊರೆನ್ಸ್‌ ಮತ್ತು ಬೆವರ್ಲಿ ಹಿಲ್ಸ್‌ನಲ್ಲೂ ಭೂ ಕಂಪಿಸಿದ ಅನುಭವ ಆಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT