ಸೋಲ್ (ಎ.ಪಿ): ಉತ್ತರ ಕೊರಿಯಾವು ಸೋಮವಾರ ಎರಡು ಖಂಡಾಂತರ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗನ್ನು ನಡಸಿತು. ಸೇನಾ ಸಾಮರ್ಥ್ಯ ಬಿಂಬಿಸಲು ಶಸ್ತ್ರಾಸ್ತ್ರಗಳ ಪ್ರದರ್ಶನವನ್ನು ನಡೆಸಿದೆ.
ಇನ್ನೊಂದೆಡೆ, ದಕ್ಷಿಣ ಕೊರಿಯಾಗೆ ಬೆಂಬಲವಾಗಿ ನಿಂತಿರುವ ಅಮೆರಿಕವು, ಅದರ ವ್ಯಾಪ್ತಿಯ ಕಡಲ ಗಡಿಗೆ ಯುದ್ಧನೌಕೆಯನ್ನು ಕಳುಹಿಸಿದೆ.
ಉತ್ತರ ಕೊರಿಯಾ ಎರಡು ಕ್ಷಿಪಣಿಗಳನ್ನು ಪ್ರಯೋಗಿಸಿದ್ದು, ಅದು ಸುಮಾರು 370 ಕಿ.ಮೀ. ದೂರದ ಸಮುದ್ರಭಾಗದಲ್ಲಿ ಬಿದ್ದಿದೆ ಎಂದು ದಕ್ಷಿಣ ಕೋರಿಯಾದ ಸೇನಾ ಜಂಟಿ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ.
ಜಪಾನ್ ಸೇನೆಯು ಈ ಕುರಿತಂತೆ ಪ್ರತಿಕ್ರಿಯಿಸಿದೆ. ಉಲ್ಲೇಖಿತ ಕ್ಷಿಪಣಿಯ ಚಲನೆಯು ಅಸಮರ್ಪಕವಾಗಿದ್ದು, ಜಪಾನ್‌ನ ವಿಶೇಷ ಆರ್ಥಿಕ ವಲಯದ ಸಮೀಪವೇ ಬಿದ್ದಿದೆ ಎಂದು ಹೇಳಿದೆ.
ಉತ್ತರ ಕೊರಿಯಾವು ಅಮೆರಿಕದ ಎಮಜಿಬಂ 140 ಸೇನಾ ಕ್ಷಿಪಣಿಗೆ ಸರಿಸಮಾನವಾದ ಮತ್ತೊಂದು ಕ್ಷಿಪಣಿ ಪ್ರಯೋಗವನ್ನು ನಡೆಸಿತು.
ಅಮೆರಿಕದ ನಿಮಿಟ್ಜ್ ಮತ್ತು ಅದರ ದಾಳಿಕೋರ ಪಡೆಯು ದಕ್ಷಿಣ ಕೋರಿಯಾ ಬಂದರು ಪ್ರದೇಶ ಬುಸನ್ ಅನ್ನು ತಲುಪುವ ಒಂದು ದಿನ ಮೊದಲು ಕ್ಷಿಪಣಿಗಳ ಪ್ರಯೋಗ ನಡೆದಿದೆ.
ಉತ್ತರ ಮತ್ತು ದಕ್ಷಿಣ ಕೋರಿಯಾ ಗಡಿಯಲ್ಲಿ ಸಮರಾಭ್ಯಾಸ ತೀವ್ರವಾಗಿ ನಡೆಯುತ್ತಿದೆ. ಎರಡೂ ರಾಷ್ಟ್ರಗಳು ಬಲ ಪ್ರದರ್ಶನಕ್ಕೆ ಮುಂದುವರಿದಿದ್ದು, ಅಣುಶಕ್ತಿ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳಲು ಒತ್ತು ನೀಡಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.