ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂಘೈನಲ್ಲಿ ಕೋವಿಡ್ ಪ್ರಕರಣ ಹೆಚ್ಚಳ: ನಾಗರಿಕರ ಆಕ್ರೋಶ

Last Updated 15 ಏಪ್ರಿಲ್ 2022, 5:53 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾದಲ್ಲಿ ಶುಕ್ರವಾರ 3,400ಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 20,700 ಲಕ್ಷಣರಹಿತ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದೆ.

ಶಾಂಘೈ ನಗರದಲ್ಲಿ ಗರಿಷ್ಠ ಸಂಖ್ಯೆಯ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಅಲ್ಲದೆ, ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಮತ್ತು ಆಹಾರ ದೊರೆಯುತ್ತಿಲ್ಲ ಎಂಬ ಆಕ್ರೋಶ ಕೇಳಿಬಂದಿದೆ.

ಸರ್ಕಾರ ಶಾಂಘೈನಲ್ಲಿ ಲಾಕ್‌ಡೌನ್ ಮತ್ತು ಕಠಿಣ ಕ್ರಮ ಹೇರಿದ್ದರೂ, ಸೋಂಕು ನಿಯಂತ್ರಣಕ್ಕೆ ಬಾರದೇ ಇರುವುದು ಮತ್ತು ಅಗತ್ಯ ಸೌಲಭ್ಯ ಕೊರತೆಯಿಂದಾಗಿ ಜನರು ಆಡಳಿತವನ್ನು ದೂರುತ್ತಿದ್ದಾರೆ.

ಚೀನಾದ ವಾಣಿಜ್ಯ ರಾಜಧಾನಿಯೆಂದು ಕರೆಯಲ್ಪಡುವ ಶಾಂಘೈನಲ್ಲಿ ಕೋವಿಡ್ ಹೆಚ್ಚಳದಿಂದ ಸ್ಥಳೀಯರಿಗೆ ಸಮಸ್ಯೆ ಎದುರಾಗಿದೆ.

ಈಗಾಗಲೇ ಸ್ಥಳೀಯಾಡಳಿತ ಹಲವು ಸುತ್ತಿನ ಪರೀಕ್ಷೆ ನಡೆಸಿದ್ದು, ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಿ ಸೋಂಕು ಲಕ್ಷಣ ಇರುವವರು ಮತ್ತು ಲಕ್ಷಣ ರಹಿತ ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT