ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಎಲೆಕ್ಟ್ರಾನಿಕ್ ಮಾಧ್ಯಮಗಳ ಚಂದಾದಾರಿಕೆಗೆ ಆನ್‌ಲೈನ್ ಪಾವತಿ ತಡೆದ ಪಾಕ್‌

Last Updated 13 ನವೆಂಬರ್ 2020, 13:17 IST
ಅಕ್ಷರ ಗಾತ್ರ

ಕರಾಚಿ: ಭಾರತದ ಎಲೆಕ್ಟ್ರಾನಿಕ್ ಮಾಧ್ಯಮಗಳ ವಿಷಯಗಳ ಚಂದಾದಾರಿಕೆಗಾಗಿ ಮಾಡಲಾಗುವ ಆನ್‌ಲೈನ್ ಪಾವತಿಗಳನ್ನು ತಕ್ಷಣವೆ ತಡೆಯುವಂತೆ ಪಾಕಿಸ್ತಾನ ಸರ್ಕಾರವು ಅಲ್ಲಿನ ಬ್ಯಾಂಕುಗಳಿಗೆ ಸೂಚನೆ ನೀಡಿದೆ.

ನವೆಂಬರ್ 9ರಂದು ಕ್ಯಾಬಿನೆಟ್ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು 'ಡಾನ್' ಪತ್ರಿಕೆ ವರದಿ ಮಾಡಿದೆ. ಅಲ್ಲದೆ, ಈ ಕುರಿತು ಎಲ್ಲ ಬ್ಯಾಂಕ್‌ಗಳು ನವೆಂಬರ್ 13ರೊಳಗೆ ದೇಶದ ಕೇಂದ್ರ ಬ್ಯಾಂಕ್ 'ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ'ಕ್ಕೆ ಅನುಸರಣಾ ವರದಿ ಸಲ್ಲಿಸಬೇಕು ಎಂದೂ ಸೂಚಿಸಲಾಗಿದೆ.

'ಪಾಕಿಸ್ತಾನ ಸರ್ಕಾರದ ಕ್ಯಾಬಿನೆಟ್‌ನಿಂದ ಪತ್ರವೊಂದು ನಮಗೆ ತಲುಪಿದೆ. 'Zee5 ವಿಡಿಯೊ ಆನ್‌-ಡಿಮಾಂಡ್‌' ಸೇವೆಯೂ ಸೇರಿದಂತೆ ಭಾರತದ ಎಲೆಕ್ಟ್ರಾನಿಕ್‌ ಮಾಧ್ಯಮದ ವಿಷಯಗಳ ಚಂದಾದಾರಿಕೆಗಾಗಿ ಮಾಡಲಾಗುವ ವಿವಿಧ ಬಗೆಯ ಪಾವತಿ, ಕ್ರೆಡಿಟ್‌ ಕಾರ್ಡ್‌ಗಳ ಬಳಕೆಯನ್ನು ನಿಲ್ಲಿಸಬೇಕು,' ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

'ಪಾಕಿಸ್ತಾನ ಸರ್ಕಾರ ತಿಳಿಸಿದ ಸೂಚನೆಗಳ ನಿಖರವಾದ ಅನುಸರಣೆಯನ್ನು ಖಚಿತಪಡಿಸಬೇಕು ಮತ್ತು ನ.13ರ ಒಳಗಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಪಾಕಿಸ್ತಾನಕ್ಕೆ ಅನುಸರಣಾ ಪತ್ರ ಸಲ್ಲಿಸಬೇಕು,' ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

ಪಾಕಿಸ್ತಾನದಲ್ಲಿ ಈಗಾಗಲೇ ಭಾರತೀಯ ಎಲೆಕ್ಟ್ರಾನಿಕ್ ಮಾಧ್ಯಮಗಳ ವಿಷಯಗಳನ್ನು ನಿಷೇಧಿಸಲಾಗಿದೆ. ಆದ್ದರಿಂದ ಹೊಸ ಸುತ್ತೋಲೆ ಡಿಟಿಎಚ್‌ ಸೇವೆಗೆ ಮಾಡಲಾಗುವ ಪಾವತಿಗಳಿಗೆ ಮಾತ್ರ ಸಮಸ್ಯೆಯಾಗಬಹುದು ಎಂದು ಪಾಕಿಸ್ತಾನ ಎಲೆಕ್ಟ್ರಾನಿಕ್ ಮೀಡಿಯಾ ನಿಯಂತ್ರಣಾ ಪ್ರಾಧಿಕಾರದ (ಪೆಮ್ರಾ) ಮಾಜಿ ಅಧ್ಯಕ್ಷ ಅಬ್ಸರ್ ಆಲಂಹೇಳಿದರು.

'ಭಾರತೀಯ ಎಲೆಕ್ಟ್ರಾನಿಕ್‌ ಮಾಧ್ಯಮದ ವಿಷಯಗಳ ಚಂದಾದಾರಿಕೆಗಾಗಿ ಪಾಕಿಸ್ತಾನದಿಂದ ಯಾವುದೇ ಪಾವತಿ ಮಾಡಲಾಗುವುದಿಲ್ಲ ಎಂಬುದನ್ನು ನಾವುಖಚಿತಪಡಿಸಬೇಕಿದೆ,' ಎಂದು ಬ್ಯಾಂಕರ್‌ಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT