ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನ ವಿರಾಮ ವಿಸ್ತರಣೆಗೆ ಪಾಕ್‌, ತೆಹ್ರಿಕ್‌–ಎ–ತಾಲಿಬಾನ್‌ ಪಾಕಿಸ್ತಾನ್‌ ಸಮ್ಮತಿ

Last Updated 31 ಮೇ 2022, 13:17 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌/ಪೆಶಾವರ: ಅಫ್ಗಾನಿಸ್ತಾನ ಗಡಿಯ ಬುಡಕಟ್ಟು ಪ್ರದೇಶಗಳಲ್ಲಿ ನಡೆಯುತ್ತಿರುವ ಉಗ್ರಗಾಮಿ ಚಟುವಟಿಕೆಗಳನ್ನು ಕೊನೆಗೊಳಿಸಲು ಮಾತುಕತೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಕದನ ವಿರಾಮದ ವಿಸ್ತರಣೆ ಒಪ್ಪಂದಕ್ಕೆ ಪಾಕಿಸ್ತಾನ ಸರ್ಕಾರ ‌ಹಾಗೂ ತೆಹ್ರಿಕ್‌–ಎ–ತಾಲಿಬಾನ್‌ ಪಾಕಿಸ್ತಾನ್‌ (ಟಿಟಿಪಿ) ಉಗ್ರ ಸಂಘಟನೆ ಒಪ್ಪಿಗೆ ಸೂಚಿಸಿವೆ.‌

ಪಾಕ್‌ ಹಾಗೂ ಟಿಟಿಪಿ ಮಧ್ಯೆ ಈ ಮುಂಚೆ ಇದ್ದ ಒಪ್ಪಂದದ ಪ್ರಕಾರ ಮೇ 30ರಂದು ಕದನ ವಿರಾಮ ಕೊನೆಗೊಳ್ಳಬೇಕಿತ್ತು. ಆದರೆ ಉಗ್ರಗಾಮಿತ್ವದ ಕೊನೆಗೊಳಿಸುವಿಕೆಗಾಗಿ ಅಫ್ಗನ್‌ನ ರಾಜಧಾನಿ ಕಾಬೂಲ್‌ನಲ್ಲಿ ದ್ವಿಪಕ್ಷದ ಸದಸ್ಯರ ನಡುವೆ ಮಾತುಕತೆಗಳು ನಡೆಯುತ್ತಿವೆ. ಈ ವೇಳೆ ಕದನ ವಿರಾಮ ವಿಸ್ತರಣೆಯಾಗಿರುವುದು ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ ಎಂದು ಮಾತುಕತೆಗಳ ಬೆಳವಣಿಗೆ ಬಗೆಗಿನ ಮೂಲಗಳನ್ನು ಉಲ್ಲೇಖಿಸಿ ಡಾನ್‌ ಪತ್ರಿಕೆ ವರದಿ ಮಾಡಿದೆ.

ಟಿಟಿಪಿಯನ್ನು ಪಾಕಿಸ್ತಾನದ ತಾಲಿಬಾನ್‌ ಎಂತಲೂ ಕರೆಯುತ್ತಾರೆ. 2007ರಲ್ಲಿ ವಿವಿಧ ಉಗ್ರ ಸಂಘಟನೆಗಳು ಕೂಡಿಕೊಂಡು ಮಾಡಿಕೊಂಡ ಒಕ್ಕೂಟವೇ ತೆಹ್ರಿಕ್‌–ಎ–ತಾಲಿಬಾನ್‌ ಪಾಕಿಸ್ತಾನ್‌. ಇಸ್ಲಾಂನ ಕಟ್ಟುನಿಟ್ಟಿನ ನಿಯಮಗಳನ್ನು ಪಾಕಿಸ್ತಾನದಾದ್ಯಂತ ಹೇರುವುದು ಈ ಉಗ್ರ ಸಂಘಟನೆಯ ಗುರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT