ನವಾಜ್‌ಗೆ ರಾಜತಾಂತ್ರಿಕ ಪಾಸ್‌ಪೋರ್ಟ್ ನಿರಾಕರಿಸಿದ ಹೈಕೋರ್ಟ್

ಇಸ್ಲಮಾಬಾದ್ (ಪಿಟಿಐ): ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್‌ಗೆ ರಜತಾಂತ್ರಿಕ ಪಾಸ್‌ಪೋರ್ಟ್ ನೀಡಬಾರದು. ನವಾಜ್ ಲಂಡನ್‌ನಿಂದ ಮರಳಿದ ಕೂಡಲೇ ಅವರನ್ನು ಬಂಧಿಸಬೇಕು ಎಂದು ಇಸ್ಲಾಮಾಬಾದ್ ಹೈಕೋರ್ಟ್ ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಅವರಿಗೆ ಸೂಚನೆ ನೀಡಿದೆ.
ನವಾಜ್ ಸಹೋದರ ಶೆಹಬಾಝ್ ಪಾಕ್ ಪ್ರಧಾನಿಯಾದ ಬೆನ್ನಲ್ಲೇ, ನವಾಜ್ ಅವರಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್ ನೀಡಲು ಸಿದ್ಧತೆ ನಡೆಯುತ್ತಿವೆ ಎಂದು ಡಾನ್ ಪತ್ರಿಕೆ ವರದಿ ಮಾಡಿತ್ತು. ಈ ವರದಿಯನ್ನು ಆಧರಿಸಿ ನಯೀಮ್ ಹೈದರ್ ಪಂಜುತಾ ಎಂಬ ವಕೀಲರು, ನವಾಜ್ ಷರೀಫ್ ಅವರು ಘೋಷಿತ ಅಪರಾಧಿಯಾಗಿದ್ದು ಅವರಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್ ನೀಡಬಾರದು. ಅವರನ್ನು ಬಂಧಿಸಬೇಕು ಎಂದು ಕೋರಿದ್ದರು.
ಪನಾಮ ಪೇಪರ್ಸ್ ಪ್ರಕರಣ ಸೇರಿದಂತೆ ಇನ್ನೂ ಹಲವು ಪ್ರಕರಣಗಳಲ್ಲಿ ನವಾಜ್ ವಿಚಾರಣೆ ಎದುರಿಸಿದ್ದರು. ನಂತರ ಅವರು ಅಪರಾಧಿಯಾಗಿ ಸಾಬೀತಾಗಿದ್ದರಿಂದ ಜೈಲಿಗೂ ಹೋಗಿದ್ದರು. ಆದರೆ ಈಗ ನವಾಜ್ ಅನಾರೋಗ್ಯದ ಕಾರಣದಿಂದ ಚಿಕಿತ್ಸೆಗೆಂದು ಲಂಡನ್‌ಗೆ ತೆರಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.