ಶುಕ್ರವಾರ, ಮೇ 14, 2021
31 °C

ಹಿಂದೂಗಳಿಗೆ ಹೋಳಿ ಹಬ್ಬದ ಶುಭ ಕೋರಿದ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಭಾನುವಾರ ಹಿಂದೂ ಸಮುದಾಯಕ್ಕೆ ಹೋಳಿ ಹಬ್ಬದ ಶುಭ ಕೋರಿದ್ದಾರೆ.

ಹೋಳಿ ಹಬ್ಬವನ್ನು ಪಾಕಿಸ್ತಾನದಲ್ಲಿ ಭಾನುವಾರ ಮತ್ತು ಸೋಮವಾರ ಆಚರಿಸಲಾಗುತ್ತಿದೆ.

"ನಮ್ಮೆಲ್ಲಾ ಹಿಂದೂ ಸಮುದಾಯಕ್ಕೆ ಬಣ್ಣಗಳ ಹಬ್ಬ ಹೋಳಿಯ ಶುಭಾಶಯಗಳು," ಎಂದು ಇಮ್ರಾನ್‌ ಖಾನ್‌ ಟ್ವೀಟ್ ಮಾಡಿದ್ದಾರೆ.

ಖಾನ್‌ ಅಲ್ಲದೇ, ಸಂಸತ್‌ ಸ್ಪೀಕರ್ ಅಸಾದ್ ಖೈಸರ್ ಸೇರಿದಂತೆ ಹಲವು ನಾಯಕರು ಹಿಂದೂ ಸಂಸದರಿಗೆ ಮತ್ತು ಹಿಂದೂ ಸಮುದಾಯಕ್ಕೆ ಹೋಳಿ ಹಬ್ಬದ ಶುಭ ಕಾಮನೆಗಳನ್ನು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ತಮ್ಮ ಧಾರ್ಮಿಕ ಹಬ್ಬಗಳನ್ನು ಬಹಿರಂಗವಾಗಿ ಆಚರಿಸುವ ಹಕ್ಕು ಹೊಂದಿವೆ ಎಂದು ಸ್ಪೀಕರ್‌ ಖೈಸರ್ ಹೇಳಿದ್ದಾರೆ.

ಹಿಂದೂಗಳು ಪಾಕಿಸ್ತಾನದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದ್ದು, ಅಧಿಕೃತ ಅಂಕಿ ಅಂಶಗಳ ಪ್ರಕಾರ 75 ಲಕ್ಷ ಹಿಂದೂಗಳು ನೆರೆ ರಾಷ್ಟ್ರದಲ್ಲಿ ನೆಲೆಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು