ಬುಧವಾರ, ಸೆಪ್ಟೆಂಬರ್ 29, 2021
20 °C

ಪಾಕ್ ಬೆಂಬಲಿತ ಖಲಿಸ್ತಾನ ಗುಂಪುಗಳು ಅಮೆರಿಕದಲ್ಲಿ ನೆಲೆ ಸ್ಥಾಪಿಸುತ್ತಿವೆ: ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಪಾಕಿಸ್ತಾನ ಬೆಂಬಲಿತ ಪತ್ಯೇಕತಾವಾದಿ ಖಲಿಸ್ತಾನ ಗುಂಪುಗಳು ಅಮೆರಿಕದಲ್ಲಿ ಸದ್ದಿಲ್ಲದೆ ನೆಲೆ ಸ್ಥಾಪಿಸುತ್ತಿವೆ ಎಂದು ವರದಿಯಾಗಿದೆ.

ಹಡ್ಸನ್ ಇನ್‌ಸ್ಟಿಟ್ಯೂಟ್ ಪ್ರಕಟಿಸಿರುವ ವರದಿಯಲ್ಲಿ ಪಾಕಿಸ್ತಾನ ಬೆಂಬಲಿತ ಖಲಿಸ್ತಾನ ಮತ್ತು ಕಾಶ್ಮೀರ ಪ್ರತ್ಯೇಕತಾವಾದಿಗಳ ನಡೆಯನ್ನು ಪರಿಶೀಲಿಸಿದೆ.

ಇದನ್ನೂ ಓದಿ: 

ಭಾರತದಲ್ಲಿ ಉಗ್ರಗಾದ ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗಿನ ಈ ಗುಂಪುಗಳ ಸಂಬಂಧ ಮತ್ತು ದಕ್ಷಿಣ ಏಷ್ಯಾದಲ್ಲಿ ಅಮೆರಿಕ ವಿದೇಶಾಂಗ ನೀತಿಯ ಮೇಲೆ ಚಟುವಟಿಕೆಗಳ ದುಷ್ಪರಿಣಾಮಗಳ ಬಗ್ಗೆ ವರದಿಯು ವಿಶ್ಲೇಷಣೆ ನಡೆಸಿದೆ.

ಪಾಕಿಸ್ತಾನ ಮೂಲದ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳಂತೆ ಖಲಿಸ್ತಾನ ಗುಂಪುಗಳು ಹೊಸ ಹೆಸರುಗಳಲ್ಲಿ ಹೊರಹೊಮ್ಮಬಹುದು ಎಂದು ವರದಿಯು ತಿಳಿಸಿದೆ.

ಖಲಿಸ್ತಾನ ಬೆಂಬಲಿಗರು ಬ್ರಿಟನ್, ಕೆನಡಾ ಮತ್ತು ಅಮೆರಿಕದಂತಹ ಪಾಶ್ಚಿಮಾತ್ಯ ದೇಶಗಳಲ್ಲಿ ನೆಲೆಗೊಂಡಿದೆ. ದುರದೃಷ್ಟವಶಾತ್, ಖಲಿಸ್ತಾನ ಕಾರ್ಯಕರ್ತರು ನಡೆಸಿದ ಹಿಂಸಾಚಾರದಲ್ಲಿ ಅಮೆರಿಕ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿಲ್ಲ ಎಂದಿದೆ.

ಖಲಿಸ್ತಾನ ಉಗ್ರವಾದ ಸಂಬಂಧ ತನಿಖೆಗೆ ಅಮೆರಿಕ ತನಿಖೆ ನಡೆಸದ ಹೊರತಾಗಿ ಹಿಂಸಾಚಾರ ನಡೆಸುತ್ತಿರುವ ಗುಂಪುಗಳನ್ನು ಮಟ್ಟ ಹಾಕಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು