ಗುರುವಾರ , ಜನವರಿ 21, 2021
20 °C

ವಾಘಾ ಗಡಿ ಬಳಿ ಪೊಲೀಸ್ ಠಾಣೆ ಮೇಲೆ ಆತ್ಮಾಹುತಿ ದಾಳಿ ಯತ್ನ ವಿಫಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಾಹೋರ್‌: ವಾಘಾ ಗಡಿ ಬಳಿಯ ಭಯೋತ್ಪಾದನಾ ನಿಗ್ರಹ ಇಲಾಖೆಯ (ಸಿಟಿಡಿ) ಪೊಲೀಸ್‌ ಠಾಣೆ ಮೇಲೆ ನಡೆದ ಆತ್ಮಾಹುತಿ ದಾಳಿ ಯತ್ನವನ್ನು ವಿಫಲಗೊಳಿಸಿ, ದಾಳಿಕೋರನನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನದ ಕಾನೂನು ಜಾರಿ ಸಂಸ್ಥೆಗಳು ಮಂಗಳವಾರ ಹೇಳಿವೆ.

ವಾಘಾ ಬಳಿಯ ಬುರ್ಕಿ ರಸ್ತೆಯಲ್ಲಿರುವ ಪೊಲೀಸ್‌ ಠಾಣೆಗೆ ಪ್ರವೇಶಿಸಲು ಶಂಕಿತ ದಾಳಿಕೋರ ಯತ್ನಿಸಿದ್ದಾನೆ. ಈ ವೇಳೆ ಗಸ್ತು ನಿರತ ಪೊಲೀಸರು ಆತನ ಬಳಿ ಹೆಸರು ಕೇಳಿದ್ದಾರೆ. ಆಗ ಆತ ಏಕಾಏಕಿ ಗುಂಡು ಹಾರಾಟ ನಡೆಸಿದ್ದಾನೆ. ಕೂಡಲೇ ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿ ಆತನನ್ನು ಹತ್ಯೆ ಮಾಡಿದ್ದಾರೆ ಎಂದು ಸಿಟಿಡಿ ವಕ್ತಾರರು ತಿಳಿಸಿದ್ದಾರೆ.

ಆತನ ಬಳಿಯಿಂದ ಆತ್ಮಾಹುತಿ ಜಾಕೆಟ್‌, ಎರಡು ಹ್ಯಾಂಡ್‌ ಗ್ರೆನೇಡ್‌, ಪಿಸ್ತೂಲು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಪಂಜಾಬ್‌ ಪ್ರಾಂತ್ಯದಲ್ಲಿ ಕಾರ್ಯಾಚರಿಸುತ್ತಿದ್ದ ಭಾರತ ಉಪಖಂಡದ ಅಲ್–ಕೈದಾ (ಎಕ್ಯೂಐಎಸ್) ಜಾಲವನ್ನು ಈ ತಿಂಗಳ ಆರಂಭದಲ್ಲಿ ಸಿಟಿಡಿ ಭೇದಿಸಿ, ಐವರು ಉಗ್ರರನ್ನು ಬಂಧಿಸಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು