ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್ ಉತ್ಪನ್ನಗಳ ಅಕ್ರಮ ರವಾನೆ: ಅಮೆರಿದಲ್ಲಿರುವ ಪಾಕ್‌ ವ್ಯಕ್ತಿ ಬಂಧನ

Last Updated 23 ಸೆಪ್ಟೆಂಬರ್ 2020, 6:37 IST
ಅಕ್ಷರ ಗಾತ್ರ

ವಾಷಿಂಗ್ಟನ್: ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟರ್ ಪರಿಕರಗಳು ಮತ್ತು ಸಾಫ್ಟ್‌ವೇರ್ ಅಪ್ಲಿಕೇಷನ್‌ ಸಲ್ಯೂಷನ್ಸ್‌ಗಳನ್ನುಅನುಮತಿ ಪಡೆಯದೇ ಅಮೆರಿಕದಿಂದ ಪಾಕಿಸ್ತಾನ ಪರಮಾಣು ಇಂಧನ ಆಯೋಗಕ್ಕೆ ರವಾನಿಸುತ್ತಿದ್ದ ಆರೋಪದ ಮೇಲೆ ಅಮೆರಿಕದಲ್ಲಿರುವ ಪಾಕಿಸ್ತಾನ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಪಾಕಿಸ್ತಾನ ಮೂಲದ ಬಿಸಿನೆಸ್ ಸಿಸ್ಟಮ್ ಇಂಟರ್‌ನ್ಯಾಷನಲ್‌ (ಬಿಎಸ್ಐ) ಪ್ರೈವೇಟ್ ಲಿಮಿಟೆಡ್ ಮತ್ತು ಶಿಕಾಗೊ ಮೂಲದ ಬಿಎಸ್ಐ ಮಾಲೀಕನಾದ ಒಬೈದುಲ್ಲಾ ಸೈಯದ್ ಅವರನ್ನು ಸೆಪ್ಟೆಂಬರ್ 16 ರಂದು ಬಂಧಿಸಲಾಗಿತ್ತು. ಅವರ ವಿರುದ್ಧದ ಆರೋಪ ಸಾಬೀತಾದರೆ ಗರಿಷ್ಠ 20 ವರ್ಷಗಳ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

ಶಿಕಾಗೊ ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಾಗಿರುವ ಈ ಪ್ರಕರಣದ ಪ್ರಕಾರ, 2006 ರಿಂದ 2015ರವರೆಗೆ ಒಬೈದುಲ್ಲಾ ಸೈಯದ್‌ ಸಂಚು ರೂಪಿಸಿ,ಅಮೆರಿಕದ ವಾಣಿಜ್ಯ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯದೆ ಕಂಪ್ಯೂಟರ್ ಉಪಕರಣಗಳನ್ನು ಪಾಕಿಸ್ತಾನ ಪರಮಾಣು ಶಕ್ತಿ ಆಯೋಗಕ್ಕೆ (ಪಿಎಇಸಿ) ರಫ್ತು ಮಾಡಿದ್ದರು. ಈ ಮೂಲಕ ಅವರು ‘ಇಂಟರ್‌ನ್ಯಾಷನ್‌ ಎಮರ್ಜೆನ್ಸಿ ಎಕಾಮಿಕ್‌ ಪವರ್‌ ಆ್ಯಕ್ಟ್‌’ ಅನ್ನು ಉಲ್ಲಂಘಿಸಿದ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT