ಮಂಗಳವಾರ, ಜೂನ್ 28, 2022
20 °C

ಪಾಕಿಸ್ತಾನ: ಸಿಂಧೂ ನದಿಗೆ ಬಿದ್ದ ವ್ಯಾನ್‌; 17 ಮಂದಿ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಪ್ರಯಾಣಿಕರ ವ್ಯಾನ್‌ವೊಂದು ನದಿಗೆ ಬಿದ್ದು, 17 ಮಂದಿ ಮೃತಪಟ್ಟಿದ್ದಾರೆ.

‘ಚಿಲಾಸದಿಂದ ರಾವಲ್ಪಿಂಡಿಯತ್ತ ಚಲಿಸುತ್ತಿದ್ದ ವ್ಯಾನ್‌ ನಿಯಂತ್ರಣ ತಪ್ಪಿ, ಕೊಹಿಸ್ತಾನ್‌ ಜಿಲ್ಲೆಯ ಪನಿಭಾದಲ್ಲಿ ಸಿಂಧೂ ನದಿಗೆ ಬಿದ್ದಿದೆ’ ಎಂದು ಡಾನ್‌ ನ್ಯೂಸ್‌ ವರದಿ ಮಾಡಿದೆ.

‘ಈ ವ್ಯಾನ್‌ನಲ್ಲಿ ಚಾಲಕ ಸೇರಿದಂತೆ 17 ಮಂದಿ ಪ್ರಯಣಿಸುತ್ತಿದ್ದರು. ಚಾಲಕ ತಿರುವು ತೆಗೆದುಕೊಳ್ಳಲು ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿ, ವ್ಯಾನ್‌ ಸಿಂಧೂ ನದಿಯೊಳಗೆ ಬಿದ್ದಿದೆ.  ನೀರಿಗೆ ಬಿದ್ದ ಸ್ವಲ್ಪ ಸಮಯದಲ್ಲೇ ಮುಳುಗಿದೆ’ ಎಂದು ಪೊಲೀಸರು ತಿಳಿಸಿದರು.

ಶೋಧ ಕಾರ್ಯ ನಡೆದಿದೆ. ಆದರೆ ನದಿಯ ಆಳದಿಂದಾಗಿ  ಅಡೆತಡೆಗಳು ಉಂಟಾಗುತ್ತಿವೆ ಎಂದು ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು