ಬಡ ರಾಷ್ಟ್ರಗಳಿಗೆ ಅಗ್ಗದ ಬೆಲೆಗೆ ಔಷಧ ನೀಡಲು ಫೈಝರ್ ನಿರ್ಧಾರ

ನ್ಯೂಯಾರ್ಕ್: ಕೋವಿಡ್–19 ಲಸಿಕೆ ಸೇರಿದಂತೆ ಎರಡು ಡಜನ್ ಔಷಧ ಉತ್ಪನ್ನಗಳನ್ನು ಜಗತ್ತಿನ ಕಡು ಬಡ ರಾಷ್ಟ್ರಗಳಿಗೆ ಲಾಭರಹಿತವಾಗಿ ಅಗ್ಗದ ದರಕ್ಕೆ ಮಾರಾಟ ಮಾಡುವುದಾಗಿ ಅಮೆರಿಕದ ಫೈಝರ್ ಕಂಪನಿ ಬುಧವಾರ ತಿಳಿಸಿದೆ.
ಸ್ವಿಟ್ಜರ್ಲೆಂಡ್‌ನ ದಾವೋಸ್ ದ್ವೀಪದಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನದ ವಾರ್ಷಿಕ ಶೃಂಗಸಭೆಯಲ್ಲಿ ಫೈಝರ್ ಈ ಬಗ್ಗೆ ಘೋಷಿಸಿದೆ. ಸಿರಿಯಾ, ಕೊಲಂಬಿಯಾ, ಉತ್ತರ ಕೊರಿಯಾ, ಆಫ್ರಿಕಾ ಖಂಡದ ದೇಶಗಳು ಸೇರಿ ಒಟ್ಟು 45 ಬಡ ರಾಷ್ಟ್ರಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.
ಹೀಗಾಗಿ ಉತ್ಪಾದನೆ ಮತ್ತು ವಿತರಣೆ ವೆಚ್ಚದ ಹಣವನ್ನು ಮಾತ್ರ ಆ ದೇಶಗಳಿಂದ ಪಡೆದು ಸಾಂಕ್ರಾಮಿಕ ರೋಗಗಳು, ಕೆಲವು ಪ್ರಕಾರದ ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.