ಸೋಮವಾರ, ಆಗಸ್ಟ್ 15, 2022
28 °C
ಜರ್ಮನಿಯಲ್ಲಿ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ನಾಲ್ಕನೇ ಕೈಗಾರಿಕೆ ಕ್ರಾಂತಿಯಲ್ಲೂ ಭಾರತ ದಾಪುಗಾಲು: ಜರ್ಮನಿಯಲ್ಲಿ ಪ್ರಧಾನಿ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ಮ್ಯೂನಿಕ್: ‘ಪ್ರಸ್ತುತ, ಜಗತ್ತನಲ್ಲಿ ನಾಲ್ಕನೇ ಕೈಗಾರಿಕಾ ಕ್ರಾಂತಿಯನ್ನು ಕಾಣುತ್ತಿದ್ದೇವೆ. ಈ ಕ್ಷೇತ್ರದಲ್ಲಿಯೂ ಭಾರತ ಹಿಂದೆ ಬಿದ್ದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜರ್ಮನಿ ಪ್ರವಾಸದಲ್ಲಿರುವ ಅವರು ಭಾನುವಾರ ಇಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.

‘ಐಟಿ. ಡಿಜಿಟಲ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಅದ್ಭುತ ಸಾಧನೆ ಮಾಡಿದೆ. ಜಾಗತಿಕವಾಗಿ ನಡೆಯುವ ಡಿಜಿಟಲ್ ವ್ಯವಹಾರದಲ್ಲಿ ಭಾರತದ ಪಾಲು ಶೇ 40ರಷ್ಟಿದೆ. ಇಂಟರ್‌ನೆಟ್‌ ಡೇಟಾ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಭಾರತ, ವಿಶ್ವದಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ಇಂಟರ್‌ನೆಟ್‌ ಸೇವೆ ನೀಡುವ ದೇಶವಾಗಿದೆ’ ಎಂದು ಹೇಳಿದರು.

‘ದೇಶದ ಶೇ 99ರಷ್ಟು ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಲಾಗಿದೆ. ಪ್ರತಿಯೊಂದು ಗ್ರಾಮವೂ ಬಯಲು ಶೌಚದಿಂದ ಮುಕ್ತವಾಗಿದೆ. ಕೋವಿಡ್‌ ಪಿಡುಗಿನ ಹಿನ್ನೆಲೆಯಲ್ಲಿ ಕಳೆದು ಎರಡು ವರ್ಷಗಳಿಂದ ದೇಶದ 80 ಕೋಟಿ ಬಡವರಿಗೆ ಉಚಿತವಾಗಿ ಪಡಿತರ ನೀಡಲಾಗುತ್ತಿದೆ’ ಎಂದರು.

‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾಡಿರುವ ಸಾಧನೆಗಳನ್ನು ಹೇಳುತ್ತಾ ಹೋದರೆ, ದೊಡ್ಡ ಪಟ್ಟಿಯೇ ಆಗುತ್ತದೆ. ಅವುಗಳನ್ನು ವಿವರಿಸುತ್ತಾ ಹೋದರೆ, ನಿಮ್ಮ ಊಟದ ಸಮಯ ಮುಗಿದರೂ, ನನ್ನ ಮಾತು ಮುಗಿಯುವುದಿಲ್ಲ’ ಎಂದು ನಗೆಬೀರಿದರು.

ದೇಶವೊಂದು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ಕೈಗೊಂಡರೆ, ಅಭಿವೃದ್ಧಿ ಎಂಬ ಗುರಿ ಸಾಧನೆ ಕಷ್ಟವೇನಲ್ಲ’ ಎಂದು ಮೋದಿ ಹೇಳಿದರು.

‘ನವಭಾರತ ತನ್ನ ಕನಸುಗಳನ್ನು ನನಸು ಮಾಡಲು, ಆ ಮೂಲಕ ಅಭಿವೃದ್ಧಿ ಸಾಧಿಸಲು ಸನ್ನದ್ಧವಾಗಿದೆ. ತನ್ನ ಸಾಮರ್ಥ್ಯಗಳಲ್ಲಿ ಭಾರತಕ್ಕೆ ನಂಬಿಕೆ ಇದೆ. ಹೀಗಾಗಿಯೇ ನಾವು ಹಳೆಯ ದಾಖಲೆಗಳನ್ನು ಮುರಿಯುವ ಜೊತೆಗೆ ಹೊಸ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು