ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಕ್ಯಾಪಿಟಲ್‌ ಭವನದ ಬಳಿ ಬಾಂಬ್‌ ಬೆದರಿಕೆ, ಅನುಮಾನಾಸ್ಪದ ಟ್ರಕ್ ಪತ್ತೆ

Last Updated 19 ಆಗಸ್ಟ್ 2021, 17:04 IST
ಅಕ್ಷರ ಗಾತ್ರ

ವಾಷಿಂಗ್ಟನ್‌:ಯುಸ್‌ ಕ್ಯಾಪಿಟಲ್‌‌ಕಟ್ಟಡ (ಸಂಸತ್‌ ಭವನ)ಮತ್ತುಲೈಬ್ರರಿ ಆಫ್‌ ಕಾಂಗ್ರೆಸ್‌ ಬಳಿ ಅನುಮಾನಾಸ್ಪದ ವಾಹನವೊಂದು ಕಾಣಿಸಿಕೊಂಡಿದ್ದು, ಅದರಲ್ಲಿ ಸ್ಫೋಟಕಗಳಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳದಿಂದ ತೆರಳುವಂತೆ ಜನರಿಗೆ ಸೂಚಿಸಲಾಗಿದೆ.

ʼಲೈಬ್ರರಿ ಆಫ್‌ ಕಾಂಗ್ರೆಸ್‌ ಬಳಿಕ ಕಾಣಿಸಿಕೊಂಡ ಅನುಮಾನಾಸ್ಪದ ವಾಹನದ ಬಗ್ಗೆ ಯುಎಸ್‌ ಕ್ಯಾಪಿಟಲ್‌ ಪೊಲೀಸರು (ಯುಎಸ್‌ಸಿಪಿ) ತನಿಖೆ ಕೈಗೊಂಡಿದ್ದಾರೆʼ ಎಂದುಯುಎಸ್‌ಸಿಪಿ ತಿಳಿಸಿದೆ.

ಈವಿಚಾರವಾಗಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ಯುಎಸ್‌ಸಿಪಿ,ಇದುಸಕ್ರಿಯ ಬಾಂಬ್ ಬೆದರಿಕೆ ತನಿಖೆಯಾಗಿದೆ.ಜನರು ಈ ಸ್ಥಳದಿಂದ ದೂರ ಉಳಿಯಬೇಕು. ಶೀಘ್ರದಲ್ಲೇ ಸಾರ್ವಜನಿಕರಿಗೆ ಹೆಚ್ಚಿನವಿವರ ನೀಡಲಾಗುವುದುಎಂದು ಮಾಹಿತಿ ಹಂಚಿಕೊಂಡಿದೆ.

ʼಫೆಡರಲ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್‌ʼ ಕೂಡ ಈ ಪ್ರಕರಣದ ತನಿಖೆಯಲ್ಲಿ ಕೈಜೋಡಿಸಿದೆ.ಪಿಕ್‌ಅಪ್‌ ಟ್ರಕ್‌ನಲ್ಲಿದ್ದ ವ್ಯಕ್ತಿಯೊಬ್ಬ ಬಾಂಬ್‌ ಬೆದರಿಕೆ ಹಾಕಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಲೈಬರಿ ಆಫ್‌ ಕಾಂಗ್ರೆಸ್‌ನ ಮುಖ್ಯ ಕಚೇರಿಯನ್ನು ಸ್ಥಳಾಂತರಿಸಲಾಗಿದೆ. ಹಾಗೆಯೇ ಸಮೀಪದಲ್ಲಿರುವ ರಿಪಬ್ಲಿಕನ್‌ ನ್ಯಾಷನಲ್‌ ಕಮಿಟಿ ಮುಖ್ಯ ಕಚೇರಿಯನ್ನೂ ಸ್ಥಳಾಂತರಿಸಲಾಗಿದೆ.

ಕ್ಯಾಪಿಟಲ್‌ ಹಿಲ್‌ನಲ್ಲಿ ಸುಮಾರು ಏಳು ತಿಂಗಳ ಬಳಿಕ ಮತ್ತೊಮ್ಮೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಕಂಡಿದ್ದ ಡೊನಾಲ್ಡ್‌ ಟ್ರಂಪ್‌ ಅವರ ಬೆಂಬಲಿಗರು, ಜನವರಿ 6ರಂದು ಕ್ಯಾಪಿಟಲ್‌ಗೆ ನುಗ್ಗಿಹಿಂಸಾಚಾರ ನಡೆಸಿದ್ದರು.

ಕಟ್ಟಡದಲ್ಲಿದ್ದ ವಸ್ತುಗಳನ್ನು ಚೆಲ್ಲಾಡಿ, ಕಲಾಕೃತಿಗಳು-ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದರು.

ಬಳಿಕಏಪ್ರಿಲ್‌ನಲ್ಲಿ ಕ್ಯಾಪಿಟಲ್‌ ಕಟ್ಟಡದ ಬಳಿ ತಡೆಗೋಡೆಗೆ ಕಾರನ್ನು ಗುದ್ದಿಸಿದ್ದ ಕಿಡಿಗೇಡಿಯೊಬ್ಬ, ಪೊಲೀಸ್‌ ಅಧಿಕಾರಿಯೊಬ್ಬರನ್ನು ಕೊಂದಿದ್ದ. ಆತನನ್ನೂ ಪೊಲೀಸರು ಗುಂಡಿಕ್ಕಿ ಹತ್ಯೆಗೈದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT