ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಗರ್ಭಿಣಿ ಪ್ರವಾಸಿ ಸಾವು: ಪೋರ್ಚುಗಲ್‌ ಆರೋಗ್ಯ ಸಚಿವೆ ರಾಜೀನಾಮೆ

Last Updated 1 ಸೆಪ್ಟೆಂಬರ್ 2022, 14:08 IST
ಅಕ್ಷರ ಗಾತ್ರ

ಲಿಸ್ಬನ್‌: ಪೋರ್ಚುಗಲ್‌ ಪ್ರವಾಸದಲ್ಲಿದ್ದ ಭಾರತೀಯ ಗರ್ಭಿಣಿ ಪ್ರವಾಸಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಆರೋಗ್ಯ ಸಚಿವೆ ಡಾ. ಮಾರ್ಟಾ ಟೆಮಿಡೊ ರಾಜೀನಾಮೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಪೋರ್ಚುಗಲ್‌ನ ಅತಿದೊಡ್ಡ ಆಸ್ಪತ್ರೆಲಿಸ್ಬೆನ್‌ನ ಸಂತ ಮರಿಯಾ ಆಸ್ಪತ್ರೆಯಲ್ಲಿ ಮಗುವಿನ ಜನನಕ್ಕೆ ಸಂಬಂಧಿಸಿದ (ನಿಯೊನಾಟಾಲಜಿ) ಸೇವೆಯ ಘಟಕವು ಭರ್ತಿಯಾಗಿದ್ದರಿಂದಬೇರೆ ಆಸ್ಪತ್ರೆಗೆ ಸಾಗಿಸುವ ವೇಳೆ 34 ವರ್ಷದ ಗರ್ಭಿಣಿ ಪ್ರವಾಸಿಗೆ ಹೃದಯ ಸ್ತಂಭನವಾಗಿದೆ (ಕಾರ್ಡಿಯಾಕ್‌ ಅರೆಸ್ಟ್‌) ಎಂದು ವರದಿಯಾಗಿದೆ. ಚಿಕಿತ್ಸಾ ಘಟಕ ಭರ್ತಿ

ಘಟನೆಗೆ ಸಂಬಂಧಿಸಿ ಪೋರ್ಚುಗೀಸ್‌ ರಾಷ್ಟ್ರದಾದ್ಯಂತ ಭಾರಿ ಟೀಕೆ ವ್ಯಕ್ತವಾಗಿದೆ. ರಾಜಧಾನಿಯ ಆಸ್ಪತ್ರೆಯೊಂದರಲ್ಲಿ ನವಜಾತ ಶಿಶುವಿಗೆ ಸಂಬಂಧಿಸಿದ ಆರೋಗ್ಯ ಸೇವೆ ಲಭ್ಯವಿಲ್ಲದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ ಎಂದು ಬುಧವಾರ ಬಿಬಿಸಿ ವರದಿ ಮಾಡಿದೆ.

ಕೋವಿಡ್‌-19 ಸರ್ವವ್ಯಾಪಿಯಾಗಿದ್ದ ಸಂದರ್ಭ ಪರಿಸ್ಥಿತಿಯನ್ನು ನಿಭಾಸಿದ್ದಕ್ಕೆ ಟೆಮಿಡೊ ಅವರು ಶ್ಲಾಘನೆಗೆ ಗುರಿಯಾಗಿದ್ದರು. 2018ರಿಂದ ಟೆಮಿಡೊ ಆರೋಗ್ಯ ಸಚಿವರಾಗಿ ಕೆಲಸ ಮಾಡುತ್ತಿದ್ದರು. ಆದರೆ ಮಂಗಳವಾರ ಅಲ್ಲಿನ ಸರ್ಕಾರವು ಕಚೇರಿಯಲ್ಲಿ ಟೆಮಿಡೊ ಮುಂದುವರಿಯುತ್ತಿಲ್ಲ ಎಂದು ಹೇಳಿತ್ತು.

ಪೋರ್ಚುಗಲ್‌ನ ಪ್ರಧಾನಿ ಆ್ಯಂಟೊನಿಯೊ ಕೋಸ್ಟ ಅವರು ಭಾರತೀಯ ಮಹಿಳೆಯ ಸಾವು ಟೆಮಿಡೊ ಅವರ ರಾಜೀನಾಮೆಗೆ ಕಾರಣ ಎಂದಿರುವ ಬಗ್ಗೆ ಅಲ್ಲಿನ ಲುಸಾ ನ್ಯೂಸ್‌ ಏಜೆನ್ಸಿ ವರದಿಯಲ್ಲಿ ಉಲ್ಲೇಖಿಸಿದೆ.

ಆಸ್ಪತ್ರೆಗಳಲ್ಲಿ ನರ್ಸ್‌ಗಳ ಕೊರತೆ, ಮಾತೃತ್ವಕ್ಕೆ ಸಂಬಂಧಿಸಿದ ಘಟಕಗಳನ್ನು ಮುಚ್ಚುತ್ತಿರುವ ಬಗ್ಗೆ, ದಾಖಲಾದ ಗರ್ಭಿಣಿ ಮಹಿಳೆಯರನ್ನು ಅಪಾಯಕಾರಿಯಾಗಿ ಬೇರೆ ಆಸ್ಪತ್ರೆಗೆ ಸಾಗಿಸುತ್ತಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತಗೊಂಡ ಬೆನ್ನಲ್ಲೇ ಪ್ರಧಾನಿ ಆ್ಯಂಟೊನಿಯೊ ಕೋಸ್ಟ ಅವರು ಆರೋಗ್ಯ ಸಚಿವರ ರಾಜೀನಾಮೆ ಕುರಿತು ಮಾತನಾಡಿದ್ದಾರೆ.

ತುರ್ತಾಗಿ ನಡೆಸಿದ ಸಿಸೇರಿಯನ್ ಬಳಿಕ ಮಗು ಆರೋಗ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ‌ಇತ್ತೀಚಿನ ತಿಂಗಳುಗಳಲ್ಲಿ ಪೋರ್ಚುಗಲ್‌ನಾದ್ಯಂತ ಇದೇ ರೀತಿಯ ಘಟನೆಗಳು ನಡೆದಿವೆ ಎಂದುವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT