ವಾಷಿಂಗ್ಟನ್: ಯೆಮನ್ನ ಕೆಲವು ಭಾಗಗಳಲ್ಲಿ ಐ.ಎಸ್ ಮತ್ತು ಅಲ್ಕೈದಾದಂತಹ ಭಯೋತ್ಪಾದನಾ ಸಂಘಟನೆಗಳ ಅಸ್ತಿತ್ವವನ್ನು ಅಳಿಸಿಹಾಕಬೇಕಿದೆ ಮತ್ತು ನಾಗರಿಕರ ಮೇಲೆ ಉಗ್ರರು ನಡೆಸುತ್ತಿರುವ ಸತತ ದಾಳಿಯನ್ನು ನಿಲ್ಲಿಸಬೇಕಿದೆ ಎಂದು ಭಾರತ ಸರ್ಕಾರ ಹೇಳಿದೆ.

ಉಗ್ರರನ್ನು ಜಾಗತಿಕವಾಗಿ ಮಟ್ಟ ಹಾಕಲು ಅಂತರರಾಷ್ಟ್ರೀಯ ಸಮುದಾಯ ಒಗ್ಗೂಡಬೇಕು ಎಂದು ವಿಶ್ವಸಂಸ್ಥೆಗೆ ಭಾರತದ ಕಾಯಂ ಉಪ ಪ್ರತಿನಿಧಿಯಾಗಿರುವ ಕೆ. ನಾಗರಾಜ್ ನಾಯ್ಡು ಹೇಳಿದ್ದಾರೆ.

ಯೆಮನ್ ಸಮಸ್ಯೆಯನ್ನು ರಾಜಕೀಯ ಪ್ರಕ್ರಿಯೆ ಮೂಲಕ ಮಾತ್ರ ಪರಿಹರಿಸಬಹುದು ಎಂದು ಅವರು ಸಭೆಯೊಂದರಲ್ಲಿ ತಿಳಿಸಿದ್ದಾರೆ.

ಯೆಮನ್ ರಾಜಧಾನಿ ಸನಾ ನಗರವನ್ನು ಬಂಡುಕೋರರು ವಶಕ್ಕೆ ಪಡೆದ ಕೆಲ ತಿಂಗಳುಗಳ ಬಳಿಕ 2015ರ ಮಾರ್ಚ್ನಿಂದ ಹೌತಿ ಉಗ್ರರ ವಿರುದ್ಧ ಸೌದಿ ಅರೇಬಿಯಾ ನೇತೃತ್ವದ ಮೈತ್ರಿಕೂಟ ಹೋರಾಡುತ್ತಿದೆ.

‘ಮಾನವ ಹಕ್ಕುಗಳನ್ನು ಉಗ್ರರು ಉಲ್ಲಂಘಿಸುತ್ತಾರೆ. ಇವರ ವಿರುದ್ಧ ಜಾಗತಿಕವಾಗಿ ಒಗ್ಗೂಡಬೇಕಿದೆ ಮತ್ತು ಉಗ್ರರ ಸಂಘಟನೆಗಳನ್ನು ಬೆಂಬಲಿಸುವವರನ್ನು ಮತ್ತು ಪೋಷಿಸುವವರನ್ನು ಹೊಣೆಗಾರರನ್ನಾಗಿಸಬೇಕಿದೆ‘ ಎಂದು ನಾಯ್ಡು ಅವರು ಅಭಿಪ್ರಾಯ ಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.