ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ರನ್ನು ಭೇಟಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು

Last Updated 19 ಸೆಪ್ಟೆಂಬರ್ 2022, 2:40 IST
ಅಕ್ಷರ ಗಾತ್ರ

ಲಂಡನ್‌:ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬ್ರಿಟನ್‌ ನೂತನ ರಾಜ3ನೇ ಚಾರ್ಲ್ಸ್‌ ಅವರನ್ನು ಭಾನುವಾರ ತಡ ರಾತ್ರಿ ಬಂಕಿಂಗ್‌ಹ್ಯಾಮ್‌ ಅರಮನೆಯಲ್ಲಿ ಭೇಟಿ ಮಾಡಿದರು.

ಮೂರು ದಿನದ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ಅವರು ಇಂದುರಾಣಿ ಎಲಿಜಬೆತ್‌ 2 ಅವರ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬಂಕಿಂಗ್‌ಹ್ಯಾಮ್‌ ಅರಮನೆಯಲ್ಲಿ ರಾಜ 3ನೇ ಚಾರ್ಲ್ಸ್‌ ಅವರನ್ನು ಭೇಟಿ ಮಾಡಿ ಮಾತಕತೆ ನಡೆಸಿದರು ಎಂದು ಬ್ರಿಟನ್‌ ಮಾಧ್ಯಮಗಳು ವರದಿ ಮಾಡಿವೆ.

ಸೋಮವಾರ ಬ್ರಿಟನ್‌ಸ್ಥಳೀಯ ಕಾಲಮಾನ ಬೆಳಿಗ್ಗೆ 11ಕ್ಕೆರಾಣಿ ಎಲಿಜಬೆತ್‌ 2 ಅವರ ಅಂತ್ಯಕ್ರಿಯೆವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ನಡೆಯಲಿದೆ. ಭಾರತ ಸರ್ಕಾರದ ಪರವಾಗಿ ರಾಷ್ಟ್ರಪತಿ ಅವರು ಗೌರವ ನಮನ ಸಲ್ಲಿಸಲಿದ್ದಾರೆ.

ರಾಣಿ ಎಲಿಜಬೆತ್‌ 2 ನಿಧನದ ಬಳಿಕ ಸೆಪ್ಟೆಂಬರ್‌ 10ರಂದುಇಲ್ಲಿನ ಸೇಂಟ್‌ ಜೇಮ್ಸ್‌ ಅರಮನೆಯಲ್ಲಿ ನೂತನ ರಾಜರಾಗಿ 3ನೇ ಚಾರ್ಲ್ಸ್‌ ಪದಗ್ರಹಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT