ಬಿಕ್ಕಟ್ಟಿನ ನಡುವೆ ಶ್ರೀಲಂಕಾ ಸಚಿವ ಸಂಪುಟ ವಿಸ್ತರಣೆ: ಎಂಟು ಮಂದಿ ಸೇರ್ಪಡೆ

ಕೊಲಂಬೊ: ಬಿಕ್ಕಟ್ಟಿನ ನಡುವೆಯೂ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ಸೋಮವಾರ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. 8 ಮಂದಿಯನ್ನು ಹೊಸದಾಗಿ ಸಂಪುಟಕ್ಕೆ ಸೇರ್ಪಡೆಗೊಳಿಸಲಾಗಿದೆ. ಆದರೆ, ಅವರು ಹಣಕಾಸು ಸಚಿವರನ್ನು ಇನ್ನೂ ನೇಮಕ ಮಾಡಿಲ್ಲ.
ಡಗ್ಲಾಸ್ ದೇವಾನಂದ (ಮೀನುಗಾರಿಕೆ), ಬಂಡೂಲ ಗುಣವರ್ಧನ (ಸಾರಿಗೆ ಮತ್ತು ಹೆದ್ದಾರಿ, ಸಮೂಹ ಮಾಧ್ಯಮ), ಕೆಹೆಲಿಯಾ ರಂಬೂಕ್‌ವೆಲ್ಲ (ಆರೋಗ್ಯ, ನೀರು ಸರಬರಾಜು), ರಮೇಶ್ ಪತಿರಾನ (ಕೈಗಾರಿಕೆ), ಮಹಿಂದ ಅಮರವೀರ (ಕೃಷಿ, ವನ್ಯಜೀವಿ, ವನ್ಯಜೀವಿ ಸಂರಕ್ಷಣೆ) ಹಾಗೂ ಇತರರು ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
₹200 ಕೋಟಿ ಮೌಲ್ಯದ ಸಹಾಯಹಸ್ತ: ಸ್ಟಾಲಿನ್ಗೆ ಕೃತಜ್ಞತೆ ಸಲ್ಲಿಸಿದ ಲಂಕಾ ಪ್ರಧಾನಿ
ಸ್ವಾತಂತ್ರ್ಯಾ ನಂತರ ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಸರ್ವಪಕ್ಷಗಳ ನೇತೃತ್ವದ ಸರ್ಕಾರಕ್ಕೆ ಶುಕ್ರವಾರವಷ್ಟೇ 9 ಮಂದಿ ಸಚಿವರ ನೇಮಕ ಮಾಡಲಾಗಿತ್ತು.
ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕಳೆದ ವಾರ ನಾಲ್ವರು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.