ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ರಮಣಶೀಲತೆ ಬೇಡ, ವಿನಮ್ರರಾಗಿ: ರಾಜತಾಂತ್ರಿಕರಿಗೆ ಷಿ ಜಿನ್‌ಪಿಂಗ್ ಸಲಹೆ

Last Updated 2 ಜೂನ್ 2021, 12:41 IST
ಅಕ್ಷರ ಗಾತ್ರ

ಬೀಜಿಂಗ್‌: ‘ದೇಶದ ವಿದ್ಯಮಾನಗಳ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿ ನೀಡುವ ಸಮಯದಲ್ಲಿ ರಾಜತಾಂತ್ರಿಕರು ನಮ್ರತೆಯಿಂದ ಕೂಡಿದ, ಉತ್ತಮ ಸಂವಹನ ಕೌಶಲ ಅಳವಡಿಸಿಕೊಳ್ಳಬೇಕು. ಮಾಧ್ಯಮ ಸಹ ಇದೇ ಮಾದರಿಯನ್ನು ಅನುಸರಿಸಬೇಕು’ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಹೇಳಿದ್ದಾರೆ.

ಕೋವಿಡ್‌–19 ಪಿಡುಗಿನ ವಿಷಯದಲ್ಲಿ ಚೀನಾ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಸಮಾಧಾನ ಹೆಚ್ಚುತ್ತಲೇ ಇದೆ. ಇದರಿಂದಾಗಿ ತಾನು ಜಾಗತಿಕವಾಗಿ ಏಕಾಂಗಿಯಾಗುತ್ತಿರುವುದನ್ನು ಚೀನಾ ಒಪ್ಪಿಕೊಂಡಂತಿದೆ. ಇದು ಜಿನ್‌ಪಿಂಗ್‌ ಅವರ ಈ ಮಾತುಗಳಲ್ಲಿ ವ್ಯಕ್ತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಲ್ಲದೇ, ಚೀನಾ ವಿರುದ್ಧ ಕೇಳಿ ಬರುವ ಟೀಕೆ– ಆರೋಪಗಳಿಗೆ ರಾಜತಾಂತ್ರಿಕರು, ಮಾಧ್ಯಮಗಳು ಪ್ರತಿಕ್ರಿಯಿಸುವ ರೀತಿ ಬಗ್ಗೆ ತಮ್ಮ ಅಸಮಾಧಾನವನ್ನು ಜಿನ್‌ಪಿಂಗ್‌ ಹೊರಹಾಕಿದ್ದಾರೆ ಎಂದೂ ಕೆಲ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಚೀನಾ ಕಮ್ಯುನಿಸ್ಟ್‌ ಪಾರ್ಟಿಯ ಪಾಲಿಟ್‌ಬ್ಯುರೊ ಹಮ್ಮಿಕೊಂಡಿದ್ದ ಅಧ್ಯಯನ ಶಿಬಿರವನ್ನು ಉದ್ದೇಶಿಸಿ ಜಿನ್‌ಪಿಂಗ್‌ ಅವರ ಭಾಷಣವನ್ನು ಉಲ್ಲೇಖಿಸಿ ಸರ್ಕಾರಿ ಒಡೆತನದ ಪತ್ರಿಕೆ ‘ಚೀನಾ ಡೈಲಿ’ ವರದಿ ಮಾಡಿದೆ.

‘ಚೀನಾದಲ್ಲಿ ಏನಾಗುತ್ತಿದೆ. ಕೆಲವು ವಿಷಯಗಳ ಕುರಿತು ನಮ್ಮ ನಿಲುವುಗಳೇನು ಎಂಬುದನ್ನು ತಿಳಿಸಲು ಹೊಸ ಪರಿಭಾಷೆ, ಅಭಿವ್ಯಕ್ತಿ ಮಾರ್ಗಗಳನ್ನು ಅನುಸರಿಸಬೇಕು’ ಎಂದು ಹೇಳಿದರು.

‘ತಜ್ಞರನ್ನು ಒಳಗೊಂಡ ಉನ್ನತ ಮಟ್ಟದ ತಂಡ ಈ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುವುದು ಅಗತ್ಯ. ಅಂತರರಾಷ್ಡ್ರೀಯ ಸಮಾವೇಶಗಳು, ವೇದಿಕೆಗಳು, ಪ್ರಮುಖ ಮಾಧ್ಯಮಗಳನ್ನು ಬಳಸಿಕೊಂಡು ಚೀನಾದ ನಿಲುವನ್ನು ಗಟ್ಟಿಯಾಗಿ ಹೇಳಬೇಕು’ ಎಂದು ಷಿ ಹೇಳಿದರು.

‘ವಿವಿಧ ದೇಶಗಳಲ್ಲಿ ಚೀನಾ ಸಂಸ್ಕೃತಿಯನ್ನು ಪಸರಿಸುವ ಅಗತ್ಯ ಇದೆ. ಆ ಮೂಲಕ ಚೀನಾದ ವರ್ಚಸ್ಸನ್ನು ಹೆಚ್ಚಿಸುವ ಪ್ರಯತ್ನವಾಗಬೇಕು ಎಂದು ಷಿ ಕಿವಿಮಾತು ಹೇಳಿದರು’ ಎಂದು ‘ಚೀನಾ ಡೈಲಿ’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT