ಕೀವ್: ದೇಶದ ಈಶಾನ್ಯ ಭಾಗದಲ್ಲಿ ಉಕ್ರೇನ್ ಪಡೆಗಳು ಮೇಲುಗೈ ಸಾಧಿಸುತ್ತಿವೆ. ಹೀಗಾಗಿ, ಉಕ್ರೇನ್‌ಗೆ ಪ್ರತಿರೋಧ ಒಡ್ಡುವ ಸಲುವಾಗಿ ತನ್ನ ಸೇನಾ ಬಲವನ್ನು ಹೆಚ್ಚಿಸಬೇಕಾದ ಒತ್ತಡದಲ್ಲಿ ರಷ್ಯಾ ಇದೆ.

ಬ್ರಿಟನ್‌ನ ರಕ್ಷಣಾ ಸಚಿವಾಲಯ ಶನಿವಾರ ಈ ಕುರಿತು ಮಾಹಿತಿ ನೀಡಿದೆ. ಹಾರ್ಕಿವ್‌ನಿಂದ 150 ಕಿ.ಮೀ. ದೂರದಲ್ಲಿರುವ ಓಸ್ಕಿಲ್ ನದಿ ಹಾಗೂ ಸ್ವಟೋವ್ ನಡುವಿನ ಪ್ರದೇಶದಲ್ಲಿ ಉಭಯ ದೇಶಗಳು ತಮ್ಮ ಪಡೆಗಳನ್ನು ನಿಯೋಜಿಸಿವೆ ಎಂದು ಸಚಿವಾಲಯ ಹೇಳಿದೆ.

ರಷ್ಯಾ ಗಡಿಗೆ ಹೊಂದಿಕೊಂಡಿರುವ, ಹಾರ್ಕಿವ್‌ನ ಈಶಾನ್ಯ ಭಾಗದಲ್ಲಿ ಉಕ್ರೇನ್ ಪಡೆಗಳು ಬಹುದೊಡ್ಡ ಭೂಭಾಗವನ್ನು ಮರಳಿ ವಶಪಡಿಸಿಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆಯುತ್ತಿದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.

ಓಸ್ಕಿಲ್ ನದಿ ದಾಟಿ ಮುನ್ನುಗ್ಗುತ್ತಿರುವ ಉಕ್ರೇನ್ ಪಡೆಗಳು, ರಷ್ಯಾ ಸೇನೆಗೆ ತೀವ್ರ ಪ್ರತಿಯೋಧ ಒಡ್ಡುತ್ತಿವೆ. ಒಂದು ವೇಳೆ ಉಕ್ರೇನ್ ಯೋಧರು ಆಕ್ರಮಣಕಾರಿ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಿದಲ್ಲಿ, ರಷ್ಯಾ ಪಡೆಗಳುಅವರಿಗೆ ಪ್ರತಿರೋಧ ಒಡ್ಡುವಷ್ಟು ಶಕ್ತವಾಗಿಲ್ಲ ಎಂದು ವಾಷಿಂಗ್ಟನ್ ಮೂಲದ ಇನ್ಸ್‌ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ವಾರ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.