ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊ ಪೆಸಿಫಿಕ್‌ನಲ್ಲಿ ಅಸ್ಥಿರತೆ: ಚೀನಾ ಕ್ರಮಕ್ಕೆ ‘ಕ್ವಾಡ್‌’ ಖಂಡನೆ

Last Updated 24 ಸೆಪ್ಟೆಂಬರ್ 2022, 12:41 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಇಂಡೊ–ಪೆಸಿಫಿಕ್‌ ವಲಯದಲ್ಲಿ ಯಥಾಸ್ಥಿತಿ ಬದಲಿರುವ, ಉದ್ವಿಗ್ನ ಸ್ಥಿತಿ ಹೆಚ್ಚಿಸು ಚೀನಾದ ಯಾವುದೇ ಏಕಪಕ್ಷೀಯ ಕ್ರಮಗಳನ್ನು ಬಲವಾಗಿ ವಿರೋಧಿಸುವುದಾಗಿ ಭಾರತ, ಆಸ್ಟ್ರೇಲಿಯ, ಜಪಾನ್‌ ಮತ್ತು ಅಮೆರಿಕ ಒಳಗೊಂಡ ಕ್ವಾಡ್‌ ಒಕ್ಕೂಟ ತಿಳಿಸಿದೆ.

ವಿಶ್ವಸಂಸ್ಥೆಯ 77ನೇ ಸಾಮಾನ್ಯ ಸಭೆಯ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ಗೆ ಭೇಟಿ ನೀಡಿರುವ ಕ್ವಾಡ್‌ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಶುಕ್ರವಾರ ಈ ಕುರಿತು ಚರ್ಚಿಸಿದ್ದು, ಜಂಟಿ ಹೇಳಿಕೆ ನೀಡಿದರು.

ವಿದೇಶಾಂಗ ಸಚಿವ ಎಸ್‌.ಜೈಶಂಕರ್, ಆಸ್ಟ್ರೇಲಿಯದ ಪೆನ್ನಿ ವೊಂಗ್, ಜಪಾನ್‌ನ ಹಯಾಷಿ ಯೊಶಿಮಸ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್ ಚರ್ಚೆಯಲ್ಲಿ ಭಾಗವಹಿಸಿದ್ದರು.

‘ಏಷಿಯಾ ಪೆಸಿಫಿಕ್ ವಲಯಕ್ಕೆ ಸಂಬಂಧಿಸಿದ ಸದಸ್ಯ ರಾಷ್ಟ್ರಗಳ ನಿಲುವು ಸ್ಪಷ್ಟವಾಗಿದೆ. ಈ ವಲಯದಲ್ಲಿ ಉದ್ವಿಗ್ನತೆ ಹೆಚ್ಚಿಸುವ ಯಾವುದೇ ಯತ್ನವನ್ನು ಖಂಡಿಸುತ್ತೇವೆ.ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದು, ಭೌಗೋಳಿಕ ಗಡಿಯನ್ನು ಗೌರವಿಸುವುದು ಅಗತ್ಯ’ ಎಂದು ಪ್ರತಿಪಾದಿಸಿವೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವ್ಯಾಪ್ತಿಯನ್ನುಶಾಶ್ವತ ಮತ್ತು ಶಾಶ್ವತಯೇತರ ಎರಡೂ ವರ್ಗದಲ್ಲಿ ವಿಸ್ತರಿಸಲು ಭಾರತ ಸೇರಿದಂತೆ ಕ್ವಾಡ್ ಸದಸ್ಯ ರಾಷ್ಟ್ರಗಳು ಒಲವು ತೋರಿವೆ. ಈ ಕುರಿತಂತೆಯೂ ಜಂಟಿ ಹೇಳಿಕೆ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT