ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಚುನಾವಣೆ: ಟ್ರಂಪ್‌ಗೆ ಸಿಖ್‌ ಸಮುದಾಯದವರ ಬೆಂಬಲ

Last Updated 28 ಅಕ್ಟೋಬರ್ 2020, 9:20 IST
ಅಕ್ಷರ ಗಾತ್ರ

ಓಕ್‌ ಕ್ರೀಕ್‌ (ಅಮೆರಿಕ): ಅಮೆರಿಕದಲ್ಲಿರುವ ಸಣ್ಣ ಉದ್ದಿಮೆದಾರರಿಗೆ ನೆರವಾಗುವಂತಹ ನೀತಿ ಜಾರಿ ಮಾಡಿರುವ ಹಾಗೂ ಭಾರತ – ಅಮೆರಿಕ ನಡುವಿನ ಬಾಂಧವ್ಯ ವೃದ್ಧಿಗೆ ನೆರವಾಗುತ್ತಿರುವ ಕಾರಣ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಿಖ್‌ ಸಮುದಾಯದವರು ಬೆಂಬಲಿಸುತ್ತಿದ್ದಾರೆ.

ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸುವ ಅಮೆರಿಕದ ಮಿಷಿಗನ್‌, ವಿಸ್ಕಾನ್ಸಿನ್‌ , ಫ್ಲೊರಿಡಾ ಮತ್ತು ಪೆನಿನ್ಸಿಲ್ವೇನಿಯಾ ರಾಜ್ಯಗಳಲ್ಲಿ ಹೆಚ್ಚು ಸಿಖ್ ಸಮುದಾಯದವರಿದ್ದಾರೆ.

‘ಅಮೆರಿಕದ ಮಿಡ್‌ವೆಸ್ಟ್‌ನಲ್ಲಿರುವ ನಮ್ಮ ಸಮುದಾಯದವರು ಹೆಚ್ಚಿನವರು ವ್ಯಾಪಾರಸ್ಥರು. ಅವರೆಲ್ಲರೂ ಅಧ್ಯಕ್ಷ ಟ್ರಂಪ್‌ ಅವರನ್ನು ಬೆಂಬಲಿಸುತ್ತಾರೆ‘ ಎಂದು ವಿಸ್ಕಾನ್ಸಿನ್‌ನ ಮಿಲ್ವಾಕೀ ಪ್ರದೇಶದ ಯಶಸ್ವಿ ಉದ್ಯಮಿ ಮತ್ತು ಪ್ರಮುಖ ಸಿಖ್ ಸಮುದಾಯದಮುಖಂಡ ದರ್ಶನ್ ಸಿಂಗ್ ಧಲಿವಾಲ್ ಸುದ್ದಿ ಸಂಸ್ಥೆಗೆ ತಿಳಿಸಿದರು.

ಟ್ರಂಪ್ ಅವರು ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಬಾಂಧವ್ಯವನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ. ಈ ಕಾರಣದಿಂದಾಗಿ ಸಿಖ್‌ ಸಮುದಾಯದವರು ದೇಶವ್ಯಾಪಿ ಹಾಗೂ ಈ ಪ್ರದೇಶಗಳಲ್ಲಿ ಟ್ರಂಪ್ ಅವರನ್ನು ಬೆಂಬಲಿಸುತ್ತಿದ್ದಾರೆ‘ ಎಂದು ಧಲಿವಾಲ್ ಹೇಳಿದರು.

‘ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸೆನಟರ್ ಕಮಲಾ ಹ್ಯಾರಿಸ್‌ ಬಗ್ಗೆ ನಾವು ಈ ಮಾತನ್ನು ಹೇಳುವುದಿಲ್ಲ'ಎಂದು ಧಲಿವಾಲ್ ಹೇಳಿದರು.

‘ಟ್ರಂಪ್ ಭಾರತದ ಪರವಾಗಿದ್ದಾರೆ. ಕಮಲಾ ಹ್ಯಾರಿಸ್ ಭಾರತೀಯ ಮೂಲದವರಾದರೂ, ಭಾರತದ ವಿರೋಧಿಯಾಗಿದ್ದಾರೆ. ಇದೇ ಎರಡು ಕಾರಣಕ್ಕಾಗಿ ನಾವು ಟ್ರಂಪ್ ಅವರನ್ನು ಬೆಂಬಲಿಸುತ್ತಿದ್ದೇವೆ‘ ಎನ್ನುತ್ತಾರೆ ಧಲಿವಾಲ್.

‘ಒಂದು ಪಕ್ಷ ಟ್ರಂಪ್ ಅವರು ಪುನಃ ಆಯ್ಕೆಯಾಗದಿದ್ದರೆ, ಚೀನಾ ನಮ್ಮನ್ನು ಸಂಕಷ್ಟಕ್ಕೆ ತಳ್ಳುತ್ತದೆ‘ ಎಂಬ ಭಯವಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT