ಗುರುವಾರ , ಆಗಸ್ಟ್ 11, 2022
21 °C

ನೀರಾ ಟಂಡನ್ ನಾಮನಿರ್ದೇಶನ: ರಿಪಬ್ಲಿಕನ್‌ ಸೆನೆಟರ್‌ಗಳ ವಿರೋಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ನಿಯೋಜಿತ ಅಧ್ಯಕ್ಷ ಜೊ ಬೈಡನ್‌ ಅವರು ಭಾರತೀಯ ಮೂಲದ ನೀರಾ ಟಂಡನ್‌ ಅವರನ್ನು ‘ನಿರ್ವಹಣೆ ಮತ್ತು ಬಜೆಟ್‌’ ನಿರ್ದೇಶಕಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ.

ಬೈಡನ್‌ ಅವರ ಈ ನಿರ್ಧಾರಕ್ಕೆ ಡೆಮಾಕ್ರಟಿಕ್‌ ಪಕ್ಷದ ಹಿರಿಯ ಸೆನೆಟರ್‌ಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ನೀರಾ ಅವರ ಹೆಸರನ್ನು ಸೆನೆಟ್‌ ಅಂಗೀಕರಿಸಿದ್ದೇ ಆದರೆ ಅವರು ಈ ಹುದ್ದೆಗೇರಿದ ಭಾರತ ಮೂಲದ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

‘ಬೈಡನ್‌ ಅವರು ‘ನಿರ್ವಹಣೆ ಮತ್ತು ಬಜೆಟ್‌’ ನಿರ್ದೇಶಕಿ ಹುದ್ದೆಗೆ ನೀರಾ ಅವರನ್ನು ನಾಮನಿರ್ದೇಶನ ಮಾಡಿರುವುದು ಸರಿಯಲ್ಲ. ನೀರಾ ಅವರು ಈ ಹಿಂದೆ ನಮ್ಮ ಸೆನೆಟರ್‌ಗಳನ್ನೇ ಹೀಯಾಳಿಸಿದ್ದರು. ಅಂತಹ ವಿವಾದಾತ್ಮಕ ಟ್ವೀಟ್‌ಗಳನ್ನೆಲ್ಲಾ ಅವರು ಈಗ ತೆಗೆದುಹಾಕಿದ್ದಾರೆ. ಅವರ ನೇಮಕಕ್ಕೆ ಸೆನೆಟ್‌ ಸದಸ್ಯರು ಒಪ್ಪಿಗೆ ಸೂಚಿಸುವುದು ಅನುಮಾನ’ ಎಂದು ಪ್ರಭಾವಿ ಸೆನೆಟರ್‌ ಎಂದೇ ಗುರುತಿಸಿಕೊಂಡಿರುವ ಜಾನ್‌ ಕಾರ್ನಿನ್‌ ನುಡಿದಿದ್ದಾರೆ.

50 ವರ್ಷ ವಯಸ್ಸಿನ ನೀರಾ, ಸೆಂಟರ್ ಫಾರ್‌ ಅಮೆರಿಕನ್‌ ಪ್ರೋಗ್ರೆಸ್‌ ಆ್ಯಕ್ಷನ್‌ ಫಂಡ್‌ನ ಮುಖ್ಯಸ್ಥೆಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು