ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್‌: ನಿಲ್ಲದ ಪ್ರತೀಕಾರ ಮನಸ್ಥಿತಿ- ಮಾಜಿ ಅಧಿಕಾರಿಗಳಿಗೆ ತಪ್ಪದ ಆತಂಕ

Last Updated 30 ನವೆಂಬರ್ 2021, 11:17 IST
ಅಕ್ಷರ ಗಾತ್ರ

ಕಾಬೂಲ್: ಅಪ್ಗಾನಿಸ್ತಾನದ ಆಡಳಿತವನ್ನು ವಶಕ್ಕೆ ಪಡೆದ ಬಳಿಕ ತಾಲಿಬಾನ್‌ ಹೋರಾಟಗಾರರು 100ಕ್ಕೂ ಹೆಚ್ಚು ಪೊಲೀಸ್ ಮತ್ತು ಗುಪ್ತದಳದ ಅಧಿಕಾರಿಗಳನ್ನು ಕೊಂದಿದ್ದಾರೆ ಅಥವಾ ‘ಅಪಹರಿಸಿ’ದ್ದಾರೆ.

ಮಾನವ ಹಕ್ಕುಗಳ ಕಣ್ಗಾವಲು ಸಂಸ್ಥೆಯು ತನ್ನ ವರದಿಯಲ್ಲಿ ಈ ಅಂಶ ಉಲ್ಲೇಖಿಸಿದೆ. ಕ್ಷಮಾದಾನದ ನಂತರವೂ ಪದಚ್ಯುತಗೊಂಡ ಸರ್ಕಾರದ ಶಸ್ತ್ರಸಜ್ಜಿತ ಸೇನೆ ಜೊತೆಗಿನ ಘರ್ಷಣೆ ಇನ್ನೂ ಮುಂದುವರಿದಿದೆ ಎಂದು ತಿಳಿಸಿದೆ.

ಸರ್ಕಾರದ ಮಾಹಿತಿ ಆಧರಿಸಿ ತಾಲಿಬಾನ್‌ ಪಡೆಗಳು ಮಾಜಿ ಅಧಿಕಾರಿಗಳನ್ನು ಬೇಟೆಯಾಡುತ್ತಿವೆ. ಶರಣಾದ ಮತ್ತು ಸುರಕ್ಷತೆ ಕುರಿತು ಖಾತರಿಪತ್ರ ಪಡೆದ ಅಧಿಕಾರಿಗಳನ್ನೇ ಗುರಿಯಾಗಿಸಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಿದೆ.

‘ಕೆಲವು ಪ್ರಕರಣಗಳಲ್ಲಿ ತಾಲಿಬಾನ್‌ನ ಸ್ಥಳೀಯ ಅಧಿಕಾರಿಗಳು, ‘ಮರೆಯಲಾಗದ ಕೃತ್ಯ’ವನ್ನು ಎಸಗಿರುವ ಕೆಲ ಜನರ ಪಟ್ಟಿ ಸ್ಥಳೀಯವಾಗಿಯೇ ಸಿದ್ಧಪಡಿಸಿಕೊಂಡಿವೆ. ತಾಲಿಬಾನ್‌ ಹೋರಾಟಗಾರರು ಕೊಲೆ ಮಾಡುವ ಶೈಲಿಯು ಅಪ್ಗಾನಿಸ್ತಾನದುದ್ದಕ್ಕೂ ಭೀತಿಯ ಭಾವನೆಯನ್ನು ಹುಟ್ಟುಹಾಕಿದೆ. ಹಿಂದಿನ ಸರ್ಕಾರದ ಜೊತೆಗೆ ಗುರುತಿಸಿಕೊಂಡ ಯಾರಿಗೂ ಸುರಕ್ಷತಾ ಭಾವನೆಯೇ ಇಲ್ಲವಾಗಿದೆ’ ಎಂದು ಮಾನವಹಕ್ಕುಗಳ ಕಣ್ಗಾವಲು ಸಂಸ್ಥೆಯು ತಿಳಿಸಿದೆ.

ಅಂತರರಾಷ್ಟ್ರೀಯ ಸಮುದಾಯದ ಬೆಂಬಲವನ್ನು ಹೊಂದಿದ್ದ ಸರ್ಕಾರವನ್ನು ಹಿಮ್ಮೆಟ್ಟಿಸಿ ತಾಲಿಬಾನ್‌ ಆಡಳಿತವು ಆಗಸ್ಟ್ 15ರಂದು ಅಪ್ಗಾನಿಸ್ತಾನದ ಆಡಳಿತವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿತ್ತು.

ಶನಿವಾರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ತಾಲಿಬಾನ್‌ನ ಪ್ರಧಾನಿ ಮೊಹಮ್ಮದ್‌ ಹಸನ್‌ ಅಕುಂದ್‌ ಅವರು, ‘ದೇಶದಲ್ಲಿ ಪ್ರತೀಕಾರವನ್ನು ಕೈಗೊಳ್ಳಲಾಗುತ್ತಿದೆ’ ಎಂಬುದನ್ನು ನಿರಾಕರಿಸಿದ್ದರು.

’ಅಧಿಕಾರವನ್ನು ವಶಕ್ಕೆ ಪಡೆದ ಕೂಡಲೇ ದೇಶದ ಎಲ್ಲರಿಗೂ ಕ್ಷಮಾದಾನ ನೀಡಲಾಗಿದೆ. ಇಂಥ ಉದಾಹರಣೆ ಎಲ್ಲಿಯಾದರೂ ಇದೆಯೇ?’ ಎಂದು ಪ್ರತಿಕಾರ ಕುರಿತ ಆತಂಕವನ್ನು ಉಲ್ಲೇಖಿಸಿ ಹೇಳಿದ್ದರು.

‘ಯಾರಿಗೂ,ಯಾವುದೇ ಸಮಸ್ಯೆ ಇಲ್ಲ. ಆದರೆ, ಯಾವುದೇ ಮಾಜಿ ರಕ್ಷಣಾ ಅಧಿಕಾರಿಯು ಅನುಚಿತವಾಗಿ ವರ್ತಿಸಿದರೆ ಆ ‘ಅಪರಾಧ’ಕ್ಕಾಗಿ ತಕ್ಕ ಶಿಕ್ಷೆಯನ್ನು ವಿಧಿಸಲಾಗುತ್ತದೆ’ ಎಂದು ಸ್ಪಷ್ಟಪಡಿಸಿದ್ದರು.

ದೇಶದಲ್ಲಿ ಹೆಚ್ಚಿನ ಕೊಲೆಗಳು ಘಟಿಸುವುದನ್ನು ತಡೆಯುವ ಹೊಣೆ ತಾಲಿಬಾನ್‌ನ ಮೇಲಿದೆ. ಇಂಥ ಕೃತ್ಯಗಳ ಹೊಣೆ ಹೊರುವ ಜೊತೆಗೆ ಕುಟುಂಬಕ್ಕೆ ಪರಿಹಾರ ನೀಡುವ ಹೊಣೆಗಾರಿಕೆಯೂ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT