ಶುಕ್ರವಾರ, ಜನವರಿ 22, 2021
23 °C

ಭಾರತೀಯ ಅಮೆರಿಕನ್ ಸಂಸದ ರೋ ಖನ್ನಾ ಸಿಐಸಿ ಉಪಾಧ್ಯಕ್ಷ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ಸಿಲಿಕಾನ್‌ವ್ಯಾಲಿಯನ್ನು ಪ್ರತಿನಿಧಿಸುವ ಭಾರತೀಯ– ಅಮೆರಿಕನ್‌ ಸಂಸದ ರೋ ಖನ್ನಾ ಅವರನ್ನು ಸಿಐಸಿ(ಕಾಂಗ್ರೆಸ್ಸನಲ್ ಇಂಡಿಯಾ ಕಾಕಸ್‌) ಸಮಿತಿಯ ಡೆಮಾಕ್ರಟಿಕ್‌ ಉಪಾಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಲಾಗಿದೆ.

1994ರಲ್ಲಿ ರಚನೆಯಾದ ಈ ಸಮಿತಿಗೆ ಖನ್ನಾ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 

ರೋ ಖನ್ನಾ ಅವರು ಸಿಲಿಕಾನ್‌ ವ್ಯಾಲಿಯಿಂದ ಮೂರು ಬಾರಿ ಅಮೆರಿಕದ ಜನಪ್ರತಿನಿಧಿಗಳ ಸಭೆಗೆ  ಆಯ್ಕೆಯಾಗಿದ್ದಾರೆ. ಕ್ಯಾಲಿಫೋರ್ನಿಯಾದ ಸೆನೆಟರ್ ಆಗಿರುವ ಕಮಲಾ ಹ್ಯಾರಿಸ್‌ ಅವರು ಅಮೆರಿಕದ ಉಪಾಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಈ ಸ್ಥಾನ ತೆರವಾಗಲಿದೆ. ಆ ಸ್ಥಾನಕ್ಕೆ ಖನ್ನಾ ಅವರು ಸಂಭ್ಯಾವ್ಯ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತಿದೆ.

‘ರೋ ಖನ್ನಾ ಅವರು ಸಿಐಸಿಯ ಉಪಾಧ್ಯಕ್ಷರಾಗಲು ಸೂಕ್ತ ವ್ಯಕ್ತಿ‘ ಎಂದು ಸಂಸದ ಬ್ರಾಡ್‌ ಶರ್ಮನ್‌ ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು