ಮಂಗಳವಾರ, ಮಾರ್ಚ್ 21, 2023
20 °C

ಇರಾಕ್‌ನಲ್ಲಿ ಅಮೆರಿಕ ರಾಯಭಾರ ಕಚೇರಿ ಗುರಿಯಾಗಿಸಿ ರಾಕೆಟ್ ದಾಳಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಬಾಗ್ದಾದ್: ಇರಾಕ್‌ನಲ್ಲಿ ಅಮೆರಿಕ ರಾಯಭಾರ ಕಚೇರಿಯನ್ನು ಗುರಿಯಾಗಿಸಿ ಗುರುವಾರ ಮೂರು ರಾಕೆಟ್ ದಾಳಿ ನಡೆದಿದೆ ಎಂದು ಇರಾಕ್ ಸೇನೆ ತಿಳಿಸಿದೆ.

ಇರಾಕ್ ಹಾಗೂ ಸಿರಿಯಾದಲ್ಲಿ ಅಮೆರಿಕ ನೆಲೆಯನ್ನು ಗುರಿಯಾಗಿಸಿಕೊಂಡು ಸರಣಿ ರಾಕೆಟ್ ಹಾಗೂ ಡ್ರೋನ್ ದಾಳಿ ನಡೆಯುತ್ತಿದೆ. 

ಇದನ್ನೂ ಓದಿ: 

ಅಮೆರಿಕ ಸೇನಾ ನೆಲೆಯ ಮೇಲಿನ ದಾಳಿಯ ಹಿಂದಿನ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಆದರೆ ಇರಾನ್ ಪ್ರಾಯೋಜಿತ ಭಯೋತ್ಪಾದಕರು ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ಅಮೆರಿಕ ರಾಯಭಾರ ಕಚೇರಿ ಮೇಲೆ ರಾಕೆಟ್ ಬಿದ್ದಿಲ್ಲ. ಆದರೆ ಗರಿಷ್ಠ ಭದ್ರತೆಯ ಸುರಕ್ಷ ವಲಯದಲ್ಲಿನ ಮೂರು ಪ್ರದೇಶಗಳನ್ನು ಗುರಿಯಾಗಿಸಲಾಗಿದೆ. 

ಅಮೆರಿಕವು ಇರಾಕ್‌ನಲ್ಲಿ 2,500ರಷ್ಟು ಸೈನಿಕರನ್ನು ನಿಯೋಜಿಸಿದೆ. ಈ ವರ್ಷ 50ಕ್ಕೂ ಹೆಚ್ಚು ದಾಳಿ ನಡೆದಿದೆ. ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ನಿರಂತರ ದಾಳಿ ನಡೆಯುತ್ತಿದೆ.

ಪಶ್ಚಿಮ ಪ್ರಾಂತ್ಯದ ಅನ್ಬರ್‌ನಲ್ಲಿ ಬುಧವಾರದಂದು ಅಮೆರಿಕ ಸೈನ್ಯ ನೆಲೆಯ ಮೇಲೆ 14 ರಾಕೆಟ್‌ಗಳನ್ನು ಹಾರಿಸಲಾಗಿತ್ತು. ಘಟನೆಯಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದರು.

ಕಳೆದ ತಿಂಗಳು ಇರಾಕ್-ಸಿರಿಯಾ ಗಡಿಯಲ್ಲಿ ಅಮೆರಿಕ ಸೈನ್ಯವು ನಡೆಸಿದ ದಾಳಿಯಲ್ಲಿ ನಾಲ್ವರನ್ನು ಹತ್ಯೆಗೈಯಲಾಗಿತ್ತು. ಇದರ ಪ್ರತೀಕಾರ ತೀರಿಸುವುದಾಗಿ ಉಗ್ರವಾದಿಗಳು ಘೋಷಿಸಿದ್ದರು.

ಒಟ್ಟಿನಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಮತ್ತಷ್ಟು ಆವರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು