ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣಿ 2ನೇ ಎಲಿಜಬೆತ್‌ ಗೌರವಾರ್ಥ ಶೋಕಾಚರಣೆ; ಚಾರ್ಲ್ಸ್‌ ಮುಂದಿನ ರಾಜ

ಬ್ರಿಟನ್‌ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ 2ನೇ ಎಲಿಜಬೆತ್
Last Updated 9 ಸೆಪ್ಟೆಂಬರ್ 2022, 16:14 IST
ಅಕ್ಷರ ಗಾತ್ರ

ಲಂಡನ್‌:ಬ್ರಿಟನ್‌ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ2ನೇ ಎಲಿಜಬೆತ್(96) ನಿಧನ ಹಿನ್ನೆಲೆಯಲ್ಲಿ ದೇಶದಲ್ಲಿ ಶೋಕಾಚರಣೆ ಘೋಷಿಸಲಾಗಿದ್ದು, ಎಲಿಜಬೆತ್‌ ಅವರ ಅಂತ್ಯಸಂಸ್ಕಾರದ ನಂತರವೂ ಏಳು ದಿನಗಳವರೆಗೆ ರಾಜಮನೆತನದಲ್ಲಿ ಶೋಕಾಚರಣೆ ಇರಲಿದೆ ಎಂದುಬಕ್ಕಿಂಗ್‌ ಹ್ಯಾಮ್ ಅರಮನೆಯು ಪ್ರಕಟಿಸಿದೆ.

ಗುರುವಾರ ರಾತ್ರಿ ನಿಧನರಾದ ರಾಣಿ 2ನೇ ಎಲಿಜಬೆತ್‌ ಅವರ ಅಂತ್ಯಸಂಸ್ಕಾರ ಇದೇ 19ರಂದುಕೇಂದ್ರ ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಅಬೆನಲ್ಲಿ ನಡೆಯುವ ನಿರೀಕ್ಷೆ ಇದೆ.ಅಂತ್ಯಕ್ರಿಯೆ ದಿನ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಲಿದೆ.

ರಾಣಿಯ ಗೌರವಾರ್ಥ ಬ್ರಿಟನ್ ಸರ್ಕಾರ ಸಹ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ. ಆದರೆ, ಶೋಕಾಚರಣೆಎಷ್ಟು ದಿನಗಳವರೆಗೆ ಇರಲಿದೆ ಎಂದು ಅದು ಸ್ಪಷ್ಟಪಡಿಸಿಲ್ಲ.

ಗನ್‌ ಸೆಲ್ಯೂಟ್‌: ರಾಣಿಯಗೌರವಾರ್ಥ ಅವರ ಜೀವಮಾನದ ಪ್ರತಿ ವರ್ಷಕ್ಕೆ ಒಂದು ಸುತ್ತು ಗುಂಡಿನಂತೆ, 96 ಸುತ್ತು ಗುಂಡುಗಳನ್ನು ಗಾಳಿಯಲ್ಲಿ ಹಾರಿಸಿ ಕೇಂದ್ರ ಲಂಡನ್‌ನಲ್ಲಿ ‘ಗನ್ ಸೆಲ್ಯೂಟ್’ ಸಲ್ಲಿಸಲಾಯಿತು.

ಚರ್ಚ್‌ಗಳಲ್ಲೂ ಗಂಟೆಗಳನ್ನು ಬಾರಿಸುವ ಮೂಲಕ ರಾಣಿಗೆ ನಮನ ಸಲ್ಲಿಸಲಾಗುತ್ತಿದೆ. ಈ ಸಂಬಂಧ ದಿ ಚರ್ಚ್‌ ಆಫ್‌ಇಂಗ್ಲೆಂಡ್ ಪಾದ್ರಿಗಳಿಗೆ ಮಾರ್ಗಸೂಚಿ ನೀಡಿದೆ.

ವಿಶೇಷ ಅಧಿವೇಶನ: 2ನೇಎಲಿಜಬೆತ್‌ ಅವರ ಸ್ಮರಣಾರ್ಥ ಶುಕ್ರವಾರ ಬ್ರಿಟನ್‌ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಯಿತು. ಸಂಸದರು ರಾಣಿಗೆ ಗೌರವ ನಮನ ಸಲ್ಲಿಸಿದರು. ಎರಡು ದಿನಗಳ ಕಾಲ ಈ ವಿಶೇಷ ಅಧಿವೇಶನ ನಡೆಯಲಿದೆ.

ಭಾರತದಲ್ಲಿ ನಾಳೆ ಶೋಕಾಚರಣೆ (ನವದೆಹಲಿ ವರದಿ): ರಾಣಿ 2ನೇ ಎಲಿಜಬೆತ್ ಅವರ ಗೌರವಾರ್ಥ ಸೆ.11ರಂದು ಭಾರತದಾದ್ಯಂತ ಶೋಕಾಚರಣೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ.

‘ಈ ಅವಧಿಯಲ್ಲಿ ದೇಶದಾದ್ಯಂತ ರಾಷ್ಟ್ರಧ್ವಜ ಅರ್ಧಕ್ಕೆ ಇಳಿಸಲಾಗುವುದು. ಯಾವುದೇ ಮನರಂಜನಾ ಕಾರ್ಯಕ್ರಮ ನಡೆಯುವುದಿಲ್ಲ’ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಚಾರ್ಲ್ಸ್‌ ಮುಂದಿನ ರಾಜ
3ನೇ ಚಾರ್ಲ್ಸ್‌ ಅವರನ್ನು ಬ್ರಿಟನ್‌ ರಾಜನಾಗಿಶನಿವಾರ ಬೆಳಿಗ್ಗೆ ಅಕ್ಸೆಶನ್ ಕೌನ್ಸಿಲ್‌ ಸಭೆಯಲ್ಲಿ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಬಕ್ಕಿಂಗ್‌ಹ್ಯಾಮ್ ಅರಮನೆ ತಿಳಿಸಿದೆ.

ರಾಣಿ 2ನೇ ಎಲಿಜಬೆತ್‌ ಅವರ ಉತ್ತರಾಧಿಕಾರ ಮೇಲ್ವಿಚಾರಣೆಯ ಔಪಚಾರಿಕ ಸಂಸ್ಥೆಯು ಬೆಳಿಗ್ಗೆ 10ರಿಂದ ಸಭೆ ಸೇರಲಿದೆ. ನಂತರ ಲಂಡನ್‌ನ ಸೇಂಟ್ ಜೇಮ್ಸ್ ಅರಮನೆಯ ಬಾಲ್ಕನಿಯಿಂದ ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕ ಘೋಷಣೆ ಹೊರಬೀಳಲಿದೆ ಎಂದು ತಿಳಿಸಿದೆ.

ಚಾರ್ಲ್ಸ್‌ ಭಾರತ ಮತ್ತು ಇಲ್ಲಿನ ಪುರಾತನ ಯೋಗ, ಆಯುರ್ವೇದದೊಂದಿಗೆಅವಿನಾಭಾವ ಸಂಬಂಧಹೊಂದಿದ್ದಾರೆ. ರಾಜಕುಮಾರರಾಗಿದ್ದ ಅವಧಿಯಲ್ಲಿ ಹಲವು ಬಾರಿ ಭಾರತಕ್ಕೆ ಭೇಟಿ ನೀಡಿ, ದೇಶದ ಬಗ್ಗೆ ಪ್ರೀತಿಯ ಮಾತನಾಡಿದ್ದಾರೆ. 2007ರಲ್ಲಿ ಅವರು ಸ್ಥಾಪಿಸಿದ ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮೂಲಕ ಭಾರತಕ್ಕೆ ಸಹಾಯಹಸ್ತ ಚಾಚಿದ್ದಾರೆ. ಕೋವಿಡ್‌ ಸಮಯದಲ್ಲೂ ಭಾರತಕ್ಕೆ ನೆರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT