ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಕ್ಷಿಪಣಿ ದಾಳಿ: ಗಣಿಯಲ್ಲಿ ಸಿಕ್ಕಿಬಿದ್ದ 600 ಕಾರ್ಮಿಕರು

Last Updated 17 ಡಿಸೆಂಬರ್ 2022, 19:28 IST
ಅಕ್ಷರ ಗಾತ್ರ

ಕೀವ್‌ (ಎ.ಪಿ): ಉಕ್ರೇನ್‌ನ ರಾಜಧಾನಿ ಕೀವ್‌ ಸೇರಿದಂತೆ ವಿವಿಧ ನಗರಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿಯನ್ನು ಮುಂದುವರಿಸಿದೆ. ಶುಕ್ರವಾರ ಕೀವ್‌ ನಗರವನ್ನೇ ಗುರಿಯಾಗಿಸಿ 12ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆದಿದೆ.

ಕೀವ್, ಹಾರ್ಕಿವ್‌, ಝಪೋರ್ಹಿಝಿಯಾ ನಗರಗಳಲ್ಲಿ ವಿದ್ಯುತ್‌ ವ್ಯತ್ಯಯ ಮುಂದುವರಿದಿದೆ. ನೀರು ಮತ್ತು ವಿದ್ಯುತ್‌ ಸಂಪರ್ಕ ಸೌಲಭ್ಯಗಳನ್ನೇ ಗುರಿಯಾಗಿಸಿ ರಷ್ಯಾ ದಾಳಿ ನಡೆಸುತ್ತಿದೆ ಎಂದು ಉಕ್ರೇನ್‌ ಹೇಳಿದೆ.ಚಳಿಗಾಲ ಆವರಿಸುತ್ತಿದ್ದಂತೆ ಇದರಿಂದ ಜನರ ಸಂಕಷ್ಟವೂ ಹೆಚ್ಚುತ್ತಿದೆ.

ಕ್ಷಿಪಣಿ ದಾಳಿ ಹಿನ್ನೆಲೆಯಲ್ಲಿಕ್ರಿವಿ ರಿಹ್ ನಗರದ ಗಣಿಯೊಂದರಲ್ಲಿ ಸುಮಾರು 600 ಕಾರ್ಮಿಕರು ರಕ್ಷಣೆ ಪಡೆದಿದ್ದಾರೆ. ಈ ಪೈಕಿ 250 ಜನರನ್ನು ರಕ್ಷಿಸಿದ್ದು, ಉಳಿದವರ ರಕ್ಷಣಾ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ರಷ್ಯಾ ಅತಿಕ್ರಮಣ ನಡೆಸಿದ ಕಳೆದ 10 ತಿಂಗಳಲ್ಲಿ ಕೀವ್‌ ನಗರದ ಮೇಲೆ ಇತ್ತೀಚಿನ ದಿನಗಳಲ್ಲಿಯೇ ದೊಡ್ಡ ಪ್ರಮಾಣದ ದಾಳಿ ನಡೆದಿದೆ. 40 ಕ್ಷಿಪಣಿಗಳ ಪೈಕಿ 37 ಅನ್ನು ಉಕ್ರೇನ್ ವಾಯುರಕ್ಷಣೆ ವ್ಯವಸ್ಥೆಯು ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ಷಿಪಣಿ ದಾಳಿಯಿಂದ ವಸತಿ ಸಂಕೀರ್ಣವು ಜಖಂಗೊಂಡಿದೆ. ಮೂವರು ಮೃತಪಟ್ಟಿದ್ದು, 13 ಜನರು ಗಾಯಗೊಂಡರು. ಅವಶೇಷಗಳಡಿ ತಾಯಿ, ಮಗು ಸಿಕ್ಕಿಬಿದ್ದಿದ್ದು, ರಕ್ಷಣಾ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT