ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ಹಾರ್ಕಿವ್‌ನ ಫ್ರೀಡಮ್‌ ಸ್ಕ್ವೇರ್‌ಗೆ ಅಪ್ಪಳಿಸಿದ ರಷ್ಯಾದ ಕ್ಷಿಪಣಿ

Last Updated 2 ಮಾರ್ಚ್ 2022, 4:46 IST
ಅಕ್ಷರ ಗಾತ್ರ

ಹಾರ್ಕಿವ್‌: ಉಕ್ರೇನ್‌ ಮೇಲೆ ರಷ್ಯಾ ದಾಳಿ ಮುಂದುವರಿದಿದ್ದು, ಮಂಗಳವಾರ ಬೆಳಗ್ಗೆ ಹಾರ್ಕಿವ್‌ ನಗರದ ಪ್ರಾದೇಶಿಕ ಆಡಳಿತದ ಕಟ್ಟಡ ಫ್ರೀಡಮ್‌ ಸ್ಕ್ವೇರ್‌ ಮೇಲೆ ಕ್ಷಿಪಣಿ ಅಪ್ಪಳಿಸುವ ವಿಡಿಯೊ ಮನ ಕಲಕುವಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿದಾಡುತ್ತಿದ್ದು ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ.

ಫ್ರೀಡಮ್‌ ಸ್ಕ್ವೇರ್‌ ಕಟ್ಟಡ ಮುಂದಿನ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದ ಸಂದರ್ಭದಲ್ಲೇ ಕ್ಷಿಪಣಿಯೊಂದು ಕಟ್ಟಡ ಮೇಲೆ ಅಪ್ಪಳಿಸುವ ದೃಶ್ಯ ವಿಡಿಯೊದಲ್ಲಿದೆ. ಕ್ಷಿಪಣಿ ದಾಳಿಯ ನಂತರದ ಸ್ಥಿತಿಗತಿಯನ್ನು 'ನ್ಯೂಯಾರ್ಕ್‌ ಟೈಮ್ಸ್‌ ವರ್ಲ್ಡ್‌' ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

'ರಷ್ಯಾ ಅನಾಗರಿಕವಾಗಿ ದಾಳಿ ನಡೆಸುತ್ತಿದೆ. ಖಂಡಿತವಾಗಿಯೂ ರಷ್ಯಾ ಸೋಲುತ್ತದೆ. ಅವರ ಬಳಿ ಬೃಹತ್‌ ಯುದ್ಧ ಟ್ಯಾಂಕ್‌ ಮತ್ತು ಶಸ್ತ್ರಾಸ್ತ್ರಗಳನ್ನು ಬಿಟ್ಟು ಬೇರೆ ವ್ಯವಸ್ಥೆಗಳು ಇಲ್ಲ' ಎಂದು ಉಕ್ರೇನ್‌ ಪರ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದ ಸ್ವಯಂ ಸೇವಕ ಬೊರಿಸ್‌ ರೆಡಿನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT