ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷ್ಯ ನಾಶಕ್ಕೆ ಸಂಚಾರಿ ಚಿತಾಗಾರ: ಉಕ್ರೇನಿನ ಸ್ಥಳೀಯ ಅಧಿಕಾರಿಗಳ ಆರೋಪ

Last Updated 6 ಏಪ್ರಿಲ್ 2022, 18:52 IST
ಅಕ್ಷರ ಗಾತ್ರ

ಮರಿಯುಪೊಲ್‌ (ಉಕ್ರೇನ್‌): ಯುದ್ಧಾಪರಾಧಗಳನ್ನುಮುಚ್ಚಿಹಾಕಲು ರಷ್ಯಾ ಪಡೆಗಳು ‘ಸಂಚಾರಿ ಚಿತಾಗಾರ’ಗಳನ್ನು ಬಳಸುತ್ತಿವೆ ಎಂದುಮರಿಯುಪೊಲ್ ಸಿಟಿ ಕೌನ್ಸಿಲ್ ಉಕ್ರೇನಿನ ಸ್ಥಳೀಯ ಅಧಿಕಾರಿಗಳು ಬುಧವಾರ ಆರೋಪಿಸಿದ್ದಾರೆ.

ಬಂದರು ನಗರ ಆಕ್ರಮಿಸಿಕೊಂಡಾಗ ತನ್ನ ಸಶಸ್ತ್ರ ಪಡೆಗಳು ಎಸಗಿರುವ ಯುದ್ಧಾಪರಾಧಗಳನ್ನು ಮುಚ್ಚಿಹಾಕಲು ರಷ್ಯಾ ಪ್ರಯತ್ನಿಸುತ್ತಿದೆ.

ಆಕ್ರಮಣದ ವೇಳೆ ಹತ್ಯೆಯಾದ ಉಕ್ರೇನ್‌ ನಾಗರಿಕರ ಗುರುತು ಸಿಗದಂತೆ ಸುಟ್ಟು ಹಾಕಲು ‘ಸಂಚಾರಿ ಚಿತಾಗಾರ’ಗಳನ್ನು ರಷ್ಯಾ ಸೇನೆ ನಿಯೋಜಿಸಿದೆ. ಅಲ್ಲದೇ, ಯುದ್ಧಾಪರಾಧಗಳ ಸಾಕ್ಷಿದಾರರು ಮತ್ತು ಉಕ್ರೇನ್‌ ರಾಷ್ಟ್ರೀಯವಾದಿಗಳನ್ನು ಪತ್ತೆಹಚ್ಚಲು ಶೋಧನಾ ಶಿಬಿರಗಳನ್ನು (ಫಿಲ್ಟರೇಶನ್‌ ಕ್ಯಾಂಪ್ಸ್‌) ಸಜ್ಜುಗೊಳಿಸಿಕೊಂಡಿದೆ ಎಂದು ಸಿಟಿ ಕೌನ್ಸಿಲ್‌ ಟೆಲಿಗ್ರಾಮ್‌ನಲ್ಲಿ ಹೇಳಿರುವುದಾಗಿ ‘ವಾಸಿಂಗ್ಟನ್‌ ಪೋಸ್ಟ್‌’ ವರದಿ ಮಾಡಿದೆ.

‘ಉಕ್ರೇನಿನ ಆಗ್ನೇಯ ಮತ್ತು ಪೂರ್ವ ಭಾಗದಿಂದ ದಾಳಿ ನಡೆಸಲು ಸೇನೆಯನ್ನು ಮರು ಸಂಯೋಜಿಸಲು ಕೆಲವು ನಗರಗಳಿಂದ ಪಡೆಗಳನ್ನು ರಷ್ಯಾ ಹಿಂಪಡೆಯುವಾಗ ಕೀವ್‌ ನಗರದ ಹೊರವಲಯದ ಬುಕಾ ಸೇರಿ ಹಲವು ಉಪನಗರಗಳಲ್ಲಿ ನರಮೇಧ ನಡೆದಿದೆ. ಸಾಮೂಹಿಕ ಸಮಾಧಿಗಳನ್ನು ಉಕ್ರೇನ್‌ ಅಧಿಕಾರಿಗಳು ಮತ್ತು ಸ್ವತಂತ್ರ ಪತ್ರಕರ್ತರು ಪತ್ತೆಹಚ್ಚಿದ್ದರು. ಬುಕಾ ನರಮೇಧಕ್ಕೆ ಜಾಗತಿಕಮಟ್ಟದಲ್ಲಿ ಆಕ್ರೋಶ ವ್ಯಕ್ತವಾಯಿತು. ಯುದ್ಧಾಪರಾಧಗಳಿಗಾಗಿ ಪುಟಿನ್‌ ಅವರನ್ನು ಶಿಕ್ಷಿಸಬೇಕೆಂದು ವಿಶ್ವಮಟ್ಟದಲ್ಲಿ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಯುದ್ಧಾಪರಾಧಗಳ ಸಾಕ್ಷ್ಯ ನಾಶಕ್ಕೆ ರಷ್ಯಾ ಪಡೆಗಳು ಈ ಹಾದಿ ಹಿಡಿದಿವೆ’ ಎಂದು ಸಿಟಿ ಕೌನ್ಸಿಲ್‌ ದೂರಿದೆ.

‘ನಾಜಿ ಕಾನ್ಸಂಟ್ರೇಶನ್ ಕ್ಯಾಂಪ್‌ಗಳ ನಂತರ ಜಗತ್ತುಮರಿಯುಪೊಲ್‌ನಲ್ಲಿ ನಡೆದಿರುವಂತಹ ದುರಂತ ನೋಡಿರಲಿಲ್ಲ. ದುರದೃಷ್ಟವಶಾತ್, ಇಂತಹ ವಿಲಕ್ಷಣ ಕೃತ್ಯ ಹೆಚ್ಚುತ್ತಿರುವುದನ್ನು ಈ ಜಗತ್ತು ನೋಡುತ್ತಿದೆ. ಇದು ಚೆಚೆನ್ಯಾ ಅಥವಾ ಅಲೆಪ್ಪೊದಂತೆ ಸುಧೀರ್ಘವಾಗಿ ನಡೆಯದು’ ಎಂದು ಮೇಯರ್‌ ವಾಡಿಂ ಬೊಯ್‌ಶೆಂಕ್‌ ಹೇಳಿರುವುದಾಗಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT