ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾವೈರಸ್ ಹುಟ್ಟಡಗಿಸಲು ಬಂತು ಚೂಯಿಂಗ್ ಗಮ್: ಕ್ಲಿನಿಕಲ್ ಟ್ರಯಲ್‌ಗೆ ಸಿದ್ದತೆ

Last Updated 4 ಡಿಸೆಂಬರ್ 2021, 13:40 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಮಾರಕ ಕೊರೊನಾವೈರಸ್ ನಿಯಂತ್ರಿಸಲು ವಿಜ್ಞಾನಿಗಳು ಈಗಾಗಲೇ ಅನೇಕ ಲಸಿಕೆಗಳನ್ನು ಕಂಡು ಹಿಡಿದರೂ ಅದು ಬೇರೆ ಬೇರೆ ವೇಷದಲ್ಲಿ ಮತ್ತೆ ಉಪಟಳ ನೀಡುತ್ತಲೆ ಇದೆ.

ಇದಕ್ಕೆ ಪರಿಹಾರ ಕಂಡುಕೊಳ್ಳಲು ವಿಜ್ಞಾನಿಗಳು ಇದೀಗ ‌ಚೂಯಿಂಗ್‌ ಗಮ್‌ ಮೊರೆ ಹೋಗಿದ್ದಾರೆ.

ಹೌದು, ಸಸ್ಯಜನ್ಯ ಪ್ರೋಟೀನ್ ಲೇಪಿತ ಚೂಯಿಂಗ್‌ ಗಮ್‌ನ್ನು ಸೇವಿಸುವ ಮೂಲಕ ಕೊರೊನಾವೈರಸ್ ಹರಡುವುದನ್ನು ತಪ್ಪಿಸಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಮೊಲಿಕ್ಯುಲರ್ ಥೆರಪಿ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ಇದನ್ನು ಸಾಬೀತು ಪಡಿಸಿದೆ.ಸಸ್ಯಜನ್ಯ ಪ್ರೋಟಿನ್ ಲೇಪಿತ ಚೂಯಿಂಗ್‌ ಗಮ್‌ನ್ನು (ACE2) ಅಗೆಯುವ ಮೂಲಕ ಕೊರೊನಾ ಹರಡುವುದನ್ನು ತಡೆಯಬಹುದು ಎಂದು ಹೇಳಲಾಗಿದೆ.

ಕೊರೊನಾವೈರಸ್ ಬಾಯಿಯ ಲಾಲಾರಸದಲ್ಲಿ ಅಡಗಿರುತ್ತದೆ. ಇದು ಕೆಮ್ಮಿದಾಗ, ಸೀನಿದಾಗ ವೇಗವಾಗಿ ಪ್ರಸರಣ ಹೊಂದುತ್ತದೆ. ಸಂಶೋಧಿಸಲಾದ ACE2 ಚೂಯಿಂಗ್‌ ಗಮ್ ಅಗೆಯುವ ಮೂಲಕ ಲಾಲಾರಸದಲ್ಲಿನ ವೈರಸ್‌ಗಳನ್ನು ಕೊಲ್ಲಬಹುದು ಎಂದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧಕ ಹೆನ್ರಿ ಡೆನೀಯಲ್ ಹೇಳಿದ್ದಾರೆ.

ಪ್ರಯೋಗಾರ್ಥವಾಗಿ ಕೆಲ ಕೋವಿಡ್ ರೋಗಿಗಳಿಗೆ ಈ ಗಮ್‌ ಅನ್ನು ನೀಡಿದಾಗ ಅವರ ಲಾವಾರಸದಲ್ಲಿನ ಕೊರೊನಾವೈರಸ್‌ನ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಕಂಡು ಬಂದಿದೆ. ಇದನ್ನು ಕ್ಲಿನಿಕಲ್ ಟ್ರಯಲ್‌ಗೆ ನೀಡಬೇಕಾಗಿದೆ ಎಂದುಹೆನ್ರಿ ಡೆನೀಯಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT