ಸೋಮವಾರ, ಸೆಪ್ಟೆಂಬರ್ 28, 2020
24 °C

ಕೋವಿಡ್‌ ನಂತರ ಚೀನಾದಲ್ಲಿ ಈಗ ಹೊಸ ಮಾದರಿಯ ಪ್ಲೇಗ್‌: ವಾರದಲ್ಲಿ 2 ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಉತ್ತರ ಚೀನಾದ ವ್ಯಕ್ತಿಯೊಬ್ಬರು ಹೊಸ ಮಾದರಿಯ ಪ್ಲೇಗ್‌ನಿಂದ ಮೃತಪಟ್ಟಿದ್ದಾರೆ. ಕಾಯಿಲೆಗೆ ಈ ವಾರದಲ್ಲಿ ಇದು ಎರಡನೇ ಸಾವು.

ವ್ಯಕ್ತಿಯು ‘ಬುಬೊನಿಕ್ ಪ್ಲೇಗ್’ ಎಂಬ ಹೊಸ ಕಾಯಿಲೆಯಿಂದ ಸಾವಿಗೀಡಾಗಿದ್ದಾರೆ. ಈ ಕಾಯಿಲೆ ಬಂದವರಲ್ಲಿ ಬಹು ಅಂಗಾಂಗ ವೈಫಲ್ಯ ಉಂಟಾಗುತ್ತದೆ. ಇದೇ ಸಮಸ್ಯೆಯಿಂದ ವ್ಯಕ್ತಿ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ‘ಬಯಾನಾವೋರ್’ ನಗರ ಆರೋಗ್ಯ ಆಯುಕ್ತರು ತಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.

ಮೃತ ವ್ಯಕ್ತಿ ವಾಸಿಸುತ್ತಿದ್ದ ಪ್ರದೇಶವನ್ನು ಸದ್ಯ ಸೀಲ್‌ಡೌನ್‌ ಮಾಡಲಾಗಿದೆ. ಅವರ ನಿಕಟ ಸಂಪರ್ಕದಲ್ಲಿದ್ದ ಏಳು ಮಂದಿಯ ಮೇಲೆ ನಿಗಾ ಇರಿಸಲಾಗಿದೆ. ಅವರೆಲ್ಲರ ಪರೀಕ್ಷೆ ಮಾಡಲಾಗಿದ್ದು, ಪ್ಲೇಗ್‌ನ ನೆಗೆಟಿವ್‌ ವರದಿ ಬಂದಿದೆ. ಮತ್ತು, ಯಾವುದೇ ರೋಗಲಕ್ಷಣಗಳು ಕಾಣಿಸಿಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಹೊಸ ಮಾದರಿಯ ಕಾಯಿಲೆಯಿಂದ ಬಹು ಅಂಗಾಂಗ ವೈಫಲ್ಯ ಉಂಟಾಗಿ ಸಾವಿಗೀಡಾಗಿದ್ದರು. ವಿಭಿನ್ನ ಮಾದರಿಯ ಕಾಯಿಲೆಯೇ ವ್ಯಕ್ತಿಯ ಸಾವಿಗೆ ಕಾರಣ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದರು. ಸದ್ಯ ವಿಭಿನ್ನ ಮಾದರಿಯ ಕಾಯಿಲೆಗೆ ಮತ್ತೊಬ್ಬರು ಮೃತಪಟ್ಟಿದ್ದಾರೆ.

ಈ ಪ್ಲೇಗ್‌ ಅನ್ನು ಚೀನಾ ಬಹುತೇಕ ನಿರ್ಮೂಲನೆ ಮಾಡಿದೆ, ಆದರೆ ಅಗಾಗ್ಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತಲೇ ಇರುತ್ತದೆ. 2009ರಲ್ಲಿ ಟಿಬೆಟ್‌ ಪ್ರಸ್ಥಭೂಮಿಯ, ಕ್ವಿಂಗೈ ಪ್ರಾಂತ್ಯದ ಜಿಕೆಟನ್‌ ಎಂಬಲ್ಲಿ ಈ ಕಾಯಿಲೆ ಸಾಂಕ್ರಾಮಿಕ ಗೊಂಡಿತ್ತು. ಆಗ ಹಲವರು ಸಾವಿಗೀಡಾಗಿದ್ದರು. ಕಾಯಿಲೆ ಕಾಣಿಸಿಕೊಂಡಿದ್ದು ಅದೇ ಕೊನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು