ಮೇನ್: ಯುರೋಪ್‌ನಲ್ಲಿ ಸುರಿದ ಭಾರಿ ಮಳೆಗೆ ಪ್ರವಾಹದ ಸ್ಥಿತಿ ಉಂಟಾಗಿದ್ದು, ಜರ್ಮನಿಯಲ್ಲಿ ಕನಿಷ್ಠ 42 ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ನೆರೆಗೆ ಹಲವು ಮನೆಗಳು ಕುಸಿದಿವೆ. ಅಸಾಧಾರಣ ಮಳೆಗೆ ನೆರೆಯ ಲಕ್ಸೆಂಬರ್ಗ್, ಹಾಲೆಂಡ್ ಹಾಗೂ ಬೆಲ್ಜಿಯಂನಲ್ಲೂ ಪ್ರವಾಹದ ಸ್ಥಿತಿ ಎದುರಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಸಿಡ್ನಿ ನಂತರ ಮೆಲ್ಬರ್ನ್ನಲ್ಲೂ ಕೋವಿಡ್ ಲಾಕ್ಡೌನ್
ಜರ್ಮನಿಯಲ್ಲಿ ರೈನ್‌ಲ್ಯಾಂಡ್ ಪ್ಯಾಲಟಿನೇಟ್ ಮತ್ತು ನಾರ್ತ್ ರೈನ್-ವೆಸ್ಟ್‌ಫೇಲಿಯಾ (ಎನ್‌ಆರ್‌ಡಬ್ಲ್ಯು) ಸ್ಟೇಟ್‌ನ ಪ್ರದೇಶಗಳು ಅತಿ ಹೆಚ್ಚು ಹಾನಿಗೊಳಗಾಗಿದ್ದು, ನದಿಗಳು ಉಕ್ಕಿ ಹರಿದಿವೆ.
ಅಹ್ರ್ವೀಲರ್ ಪಟ್ಟಣದ ಸುತ್ತಮುತ್ತಲಿನ ಪ್ರದೇಶದಿಂದ 18 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಎನ್‌ಆರ್‌ಡಬ್ಲ್ಯು ಉತ್ತರಕ್ಕೆ ಆಯ್ಸ್‌ಕರ್ಚ್ ಪ್ರಾಂತ್ಯದಲ್ಲಿ 15 ಮಂದಿ ಸಾವಿಗೀಡಾಗಿದ್ದಾರೆ. ಸ್ಥಳೀಯರ ಪ್ರಕಾರ 70 ಮಂದಿ ನಾಪತ್ತೆಯಾಗಿದ್ದಾರೆ.
ಎನ್‌ಆರ್‌ಡಬ್ಲ್ಯು ಪ್ರದೇಶದಲ್ಲಿ 1.35 ಲಕ್ಷ ನಿವಾಸಿಗಳಿಗೆ ವಿದ್ಯುತ್ ಕಡಿತವುಂಟಾಗಿದೆ. ಮತ್ತಷ್ಟು ಮಳೆ ಸುರಿದರೆ ಪ್ರವಾಹದ ತೀವ್ರತೆ ಹೆಚ್ಚಲಿದೆ ಎಂದು ಎಚ್ಚರಿಸಲಾಗಿದೆ. ಈ ಮಧ್ಯೆ ರಕ್ಷಣಾ ಕಾರ್ಯಾಚರಣೆಗೆ ಆವೇಗ ತುಂಬಲಾಗಿದೆ.
ಜನರಿಗೆ ಮನೆಯಲ್ಲೇ ಉಳಿದುಕೊಳ್ಳುವಂತೆ ಸೂಚಿಸಲಾಗಿದ್ದು, ಸಾಧ್ಯವಾದರೆ ಮನೆಯ ಮಹಡಿಯಲ್ಲಿ ಇರುವಂತೆ ತಿಳಿಸಲಾಗಿದೆ. ಜರ್ಮನಿ ಮಿಲಿಟರಿರಕ್ಷಣಾ ಕಾರ್ಯಾಚರಣೆಗೆ ನೇತೃತ್ವ ವಹಿಸುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.