ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಲಾಕ್‌ಡೌನ್‌: ಆಹಾರಕ್ಕಾಗಿ ಪರದಾಟ

Last Updated 3 ಏಪ್ರಿಲ್ 2022, 14:23 IST
ಅಕ್ಷರ ಗಾತ್ರ

ಬೀಜಿಂಗ್‌ (ಎಪಿ): ಚೀನಾದ ದೊಡ್ಡ ನಗರ ಶಾಂಘೈನಲ್ಲಿ ಲಾಕ್‌ಡೌನ್‌ ನಡುವೆಯೂ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಲಕ್ಷಾಂತರ ಮಂದಿ ಮನೆಯಲ್ಲೇ ಉಳಿಯುವಂತಾಗಿದೆ. ಸರ್ಕಾರದ ಕೋವಿಡ್‌ನ ನಿರ್ಬಂಧಗಳಿಂದ ಇಲ್ಲಿನ ನಿವಾಸಿಗಳು ಬೇಸತ್ತು ಹೋಗಿದ್ದಾರೆ.

2.6 ಕೋಟಿ ಜನಸಂಖ್ಯೆ ಹೊಂದಿರುವ ಶಾಂಘೈನಲ್ಲಿ ಕಳೆದ ವಾರವೇ ಎರಡು ಹಂತದ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಮನೆಯಿಂದ ಹೊರಬಾರದಂತೆಯೂ ನಿರ್ಬಂಧಿಸಲಾಗಿದೆ. ಇದರಿಂದ ಸರಿಯಾಗಿ ಆಹಾರ, ಔಷಧಿ ಮತ್ತು ಆರೋಗ್ಯ ಸೇವೆಗಳು ಪೂರೈಕೆಯಾಗುತ್ತಿಲ್ಲ. ಕೋವಿಡ್‌ ಪತ್ತೆಗಾಗಿ ಸ್ವಯಂ ಪರೀಕ್ಷೆಗೆ ಒಳಗಾಗುವ ಉಪಕರಣಗಳು, ಮಾಸ್ಕ್‌ ಸೇರಿದಂತೆ ಸೋಂಕು ತಡೆಗಟ್ಟಲುಮುನ್ನೆಚ್ಚರಿಕೆ ಸಾಧನಗಳು ತಲುಪುತ್ತಿಲ್ಲ ಎಂದು ದೂರು ಕೇಳಿ ಬಂದಿದೆ.

ಲಾಕ್‌ಡೌನ್‌ಗೆ ಶಾಂಘೈ ಜನರಿಂದ ಪ್ರತಿರೋಧ ವ್ಯಕ್ತವಾಗುತ್ತಿದೆ ಎಂದು ಚಿಕಾಗೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಟ್ವೀಟ್‌ ಮಾಡಿದ್ದಾರೆ.

ಭಾನುವಾರ 438 ಹೊಸ ಕೋವಿಡ್‌ ಪ್ರಕರಣ ದಾಖಲಾಗಿದ್ದು, 7,788 ಲಕ್ಷಣ ರಹಿತ ಪ್ರಕರಣಗಳು ವರದಿಯಾಗಿದೆ. ಜಿಲಿನ್‌ ಪ್ರದೇಶದಲ್ಲಿ 4,445 ಪ್ರಕರಣಗಳು ದೃಢಪಟ್ಟಿವೆ. ಇಲ್ಲಿ ಶನಿವಾರ ಸೋಂಕು ಹರಡುವಿಕೆ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT