ಸೋಮವಾರ, ಡಿಸೆಂಬರ್ 6, 2021
24 °C

ಕೋವಿಡ್‌ ಲಸಿಕೆ ಪಡೆದವರಿಗೆ ರಸ್ತೆ ಮಾರ್ಗ ತೆರೆಯಲು ಸಿಂಗಪುರ, ಮಲೇಷ್ಯಾ ನಿರ್ಧಾರ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

‌‌ಸಿಂಗಪುರ: ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಹಾಕಿಸಿಕೊಂಡವರಿಗೆ ರಸ್ತೆ ಮಾರ್ಗವನ್ನು ತೆರೆಯಲು ಸಿಂಗಪುರ ಮತ್ತು ಮಲೇಷ್ಯಾ ಸರ್ಕಾರ ನಿರ್ಧರಿಸಿದೆ. 

ನವೆಂಬರ್‌ 29ರಿಂದ ಇದು ಜಾರಿಗೆ ಬರಲಿದ್ದು, ಚಂಗಿ ವಿಮಾನ ನಿಲ್ದಾಣ ಮತ್ತು ಕ್ವಾಲಾಲಂಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ವಿಸ್ತರಿಸಲಾಗುವುದು ಎಂದು ಪ‍್ರಕಟಣೆಯಲ್ಲಿ ತಿಳಿಸಲಾಗಿದೆ. 

‘ಮೊದಲ ಹಂತದಲ್ಲಿ ಕೇವಲ ನಾಗರಿಕರು, ಶಾಶ್ವತ ನಿವಾಸಿ ಅಥವಾ ದೀರ್ಘಕಾಲದ ಪಾಸ್‌ ಹೊಂದಿದವರಿಗೆ ಮಾತ್ರ ಈ ಲೇನ್‌ ಬಳಸಲು ಅನುಮತಿ ನೀಡಲಾಗುವುದು. ಬಳಿಕ ಇದನ್ನು ವಿಸ್ತರಿಸಲಾಗುವುದು’ ಎಂದು ಸಿಂಗಪುರದ ಪ್ರಧಾನಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಲೇಷ್ಯಾ ಪ್ರತ್ಯೇಕ ಘೋಷಣೆಯನ್ನು ಮಾಡಿದೆ. 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು